ನವದೆಹಲಿ: ಪಾಕಿಸ್ತಾನಿ ಸಿನಿಮಾಗಳಲ್ಲಿ ಹಿಂದೂ ಮಹಿಳೆಯರನ್ನು ಮತಾಂತರಕ್ಕೆ ಉತ್ತೇಜಿಸಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ವಿಡಿಯೋ ಕ್ಲಿಪ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಪಾಕ್ ಸೂಪರ್ ಸ್ಟಾರ್ ಶಾನ್ ಶಾಹಿದ್ ಅಭಿನಮಯದ 'ಬಾಡರ್' ಸಿನಿಮಾದ ಐದು ಕ್ಲಿಪ್‌ಗಳನ್ನು ಜೇಮ್ಸ್ ಆಫ್ ಬಾಲಿವುಡ್ ಟ್ಟಿಟ್ಟರ್ ಖಾತೆಯಲ್ಲಿ ಟ್ವೀಟ ಮಾಡಲಾಗಿದೆ. ಈ ಐದು ಕ್ಲಿಪ್‌ಗಳು ಹಿಂದೂ ಮಹಿಳೆಯನ್ನು ಮತಾಂತರಕ್ಕೆ ಉತ್ತೇಜಿಸುವ ಪ್ರಸಂಗವನ್ನು ವಿವರಿಸುತ್ತವೆ.
ಮೊದಲ ಕ್ಲಿಕ್‌ನಲ್ಲಿ ನಟ ಶಾನ್ ಶಾಹಿದ್ ಪಾಕಿಸ್ತಾನದ ಪುರುಷ ಮೇಜರ್ ಖಾಲಿದ್ ಪಾತ್ರದಲ್ಲಿ ಕಾಣಿಸುತ್ತಾರೆ. ಖಾಲಿದ್ ಹಾಗೂ ಭಾರತೀಯ ಪುರುಷ ಮೇಜರ್ ಭರತ್ ನಡುವೆ ದುಬೈನಲ್ಲಿ ನಡೆದ ಬಾಕ್ಸಿಂಗ್ ಪಂದ್ಯವೊಂದರಲ್ಲಿ ಭಾರತೀಯ ಮಹಿಳೆ ಪ್ರೀತಿ ಮುಖ್ಯ ಅತಿಥಿಯಾಗುತ್ತಾರೆ.
ಎರಡನೇ ಕ್ಲಿಪ್‌ನಲ್ಲಿ ಖಾಲಿದ್ ಕಬ್ಬಿಣದಂತೆ ಬಲಶಾಲಿ ಹಾಗೂ ಭರತ್ ದುರ್ಬಲ ಎಂದು ಬಿಂಬಿಸಲಾಗುತ್ತದೆ. ನಟಿ ಪ್ರೀತಿ ತಕ್ಷಣ ಖಾಲಿದ್‌ಗೆ ಬೀಳುತ್ತಾಳೆ. ಹೀಗೆ ಐದು ಕ್ಲಿಪ್‌ಗಳಲ್ಲಿ ಮತಾಂತರದ ಬಗ್ಗೆ ತಿಳಿಸಲಾಗಿದೆ.
PublicNext
24/11/2020 09:42 pm