ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾ ಕಳೆದು ಕೂಲ್ ಆಗಿ ಮಾಲ್ಡೀವ್ಸ್ ಮೂಡ್ ಗೆ ಜಾರಿದ ಸೆಲಿಬ್ರೀಟಿಸ್

ಕೊರೊನಾ ಲಾಕ್ ಡೌನ್ ತೆರವಾಗಿದ್ದೇ ತಂಡ ಬಾಲಿವುಡ್ ಸ್ಟಾರ್ಸ್ ಒಬ್ಬೊಬ್ಬರಾಗಿ ಮಾಲ್ಡೀವ್ಸ್ ಮೂಡ್ ಗೆ ಜಾರಿದ್ದಾರೆ. ಅತ್ಯಂತ ಸುಂದರ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಮಾಲ್ಡೀವ್ ನೀಲಿ ಮೋಡಿಗೆ ಮಾರು ಹೋಗಿ ಮೋಜಿನ ಆನಂದದ ದಿನಗಳನ್ನು ಕಳೆಯುತ್ತಿದ್ದಾರೆ.

ಬಾಲಿವುಡ್ ನಟಿ ಮೌನಿ ರಾಯ್ ಕೊಲೊನಾ ಹಾವಳಿ ಕಡಿಮೆಯಾಗಿದ್ದೆ ತಡ ಮಾಲ್ಡೀವ್ಸ್ ದಡ ಸೇರಿದ್ದಾರೆ. ಆ ಮೌನಿರಾಯ್ ವೈರಲ್ ಪೋಟೋಗಳ ನೋಟ ಹೀಗಿದೆ.

ಇತ್ತ ನಟಿ ತಾಪ್ಸಿ ಸಹ ತನ್ನ ಬಾಯ್ ಪ್ರೇಂಡ್ ಜೊತೆ ಮಾಲ್ಡೀವ್ಸ್ ವೆಕೇಷನ್ ಎಂಜಾಯ್ ಮಾಡುತ್ತಿದ್ದರೆ, ಮಂದಿರ ಬೇಡಿ ರೆಡ್ ಬಿಕಿನಿ ಫೋಟೋ ಹಾಕಿ ನೀವು ನನ್ನನ್ನು ನೋಡ್ತಿದ್ದೀರಿ. ನಾನು ಆಕಾಶ ನೋಡ್ತಿನಿ ಎಂದು ಪೋಟೋ ಶೇರ್ ಮಾಡಿದ್ದಾರೆ. ಇನ್ನು ವರುಣ್ ಧವನ್ ಸಹ ಮಾಲ್ಡೀವ್ಸ್ ಮೂಡಲ್ಲಿದ್ದರೆ. ಫೇಮಸ್ ಫ್ಯಾಷನ್ ಡಿಸೈನರ್ ಮಸಬಾ ಗುಪ್ತಾ, ತಾರಾ ಸುತಾರಿಯಾ ಬೀಚ್ ಬರ್ತಡೇ ಬೇಬಿ ಅಂತಾ ಬ್ಯೂಟಿಫುಲ್ ಪಿಕ್ ಅಪ್ಲೋಡ್ ಮಾಡಿದ್ದಾರೆ.

ನಟ ಟೈಗರ್ ಶ್ರಾಫ್ ಕೂಡಾ ಮಾಲ್ಡೀವ್ಸ್ ನಲ್ಲಿ ಕೂಲ್ ಆಗಿ ಕೂಲಿಂಗ್ ಗ್ಲಾಸ್ ಹಾಕಿ ಸೂರ್ಯನನ್ನೇ ನೋಡುತ್ತಿದ್ದಾರೆ. ದಿಶಾ ಪಟಾಣಿ, ರಾಕುಲ್ ಪ್ರೀತ್ ಸಿಂಗ್ ಹಾಟ್ ಫೋಟೋ ಪಡ್ಡೆ ಹುಡುಗರ ನಿದ್ದೆ ಗೆಡಿಸಿವೆ.

Edited By : Nagesh Gaonkar
PublicNext

PublicNext

21/11/2020 02:47 pm

Cinque Terre

76.96 K

Cinque Terre

0