ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಥಿಯೇಟರ್ ಗೆ ಬಾರದ ಪ್ರೇಕ್ಷಕ, ಸಿಂಗಲ್ ಸ್ಕ್ರೀನ್ ಕ್ಲೋಸ್ ಮಾಡಲಿದ್ದಾನೆ ಮಾಲೀಕ

ಕೊರೊನಾ ವೈರಸ್ ಕರಾಳ ದಿನಗಳು ವಿಶ್ವದ ಪ್ರತಿ ಕ್ಷೇತ್ರಕ್ಕೂ ದೊಡ್ಡ ಮಟ್ಟದ ಆಘಾತವುಂಟು ಮಾಡಿವೆ. ಸದ್ಯ ಕೊರೊನಾ ಪ್ರಕರಣ ಕಡಿಮೆಯಾಗಿದ್ದನ್ನ ತಿಳಿದು ಬಾಗಿಲು ತೆರದ ಚಿತ್ರ ಮಂದಿರಗಳು ಮತ್ತೆ ನರಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು ! ಜನ ಸಿನಿಮಾ ನೋಡಲು ಥಿಯೇಟರ್ ಗೆ ಬರುತ್ತಿಲ್ಲ. ಮಲ್ಟಿಪ್ಲೆಕ್ಸ್ ಮಳಿಗೆಗಳಲ್ಲೇ ಒಬ್ಬರು ಅಥವಾ ಇಬ್ಬರು ಇದ್ದರೂ ಪ್ರೇಕ್ಷಕರಿಗಾಗಿ ಸಿನಿಮಾ ಪ್ರದರ್ಶನವಾಗುತ್ತಿದೆ. ಇಂತಹ ಪರಿಸ್ಥಿತಿ ಇಡೀ ದೇಶದೆಲ್ಲೆಡೆ ವ್ಯಾಪಿಸಿದ್ದು, ಈ ಕಾರಣದಿಂದಾಗಿ ಕೋಲ್ಕತ್ತದಲ್ಲಿ ಥಿಯೇಟರ್ ಮಾಲೀಕರು ಸಿಂಗಲ್ ಸ್ಕ್ರೀನ್ ಮುಚ್ಚುವ ನಿರ್ಧಾರಕ್ಕೆ ಬಂದಿದ್ದಾರಂತೆ.

ಒಂದು ದಿನಕ್ಕೆ ಕೇವಲ 30 ಮಂದಿ ಮಾತ್ರ ಸಿನಿಮಾ ನೋಡಲು ಬರುತ್ತಿದ್ದು, ಚಿತ್ರಮಂದಿರಗಳ ಮಾಲೀಕರು ನಷ್ಟಕ್ಕೆ ಒಳಗಾಗಿರುವ ಕಾರಣ ಈಗಿರುವ ಪರಿಸ್ಥಿತಿಯಲ್ಲಿ ಸಿನಿಮಾ ಪ್ರದರ್ಶನ ಮಾಡಿ ಸಿಬ್ಬಂದಿಗಳಿಗೆ ವೇತನ ನೀಡುವಷ್ಟು ಆದಾಯ ಇಲ್ಲವಂತೆ, ಹೀಗಾಗಿ ಮಾಲೀಕರೆ ಸಿಂಗಲ್ ಸ್ಕ್ರೀನ್ ಮುಚ್ಚುವ ನಿರ್ಧಾರ ಬಂದಿದ್ದಾರೆ.

ಈಗಾಗಲೇ ಕೋಲ್ಕತ್ತಾದಲ್ಲಿ ಮೇನಕಾ ಹಾಗೂ ಇತರೆ ಚಿತ್ರಮಂದಿರಗಳು ಶುಕ್ರವಾರದಿಂದಲೇ ಪ್ರದರ್ಶನಕ್ಕೆ ಗುಡ್ ಬೈ ಹೇಳಿವೆ.

Edited By : Nagesh Gaonkar
PublicNext

PublicNext

21/11/2020 12:14 pm

Cinque Terre

81.76 K

Cinque Terre

2