ಬೆಳ್ಳಿತೆರೆಯ ಸ್ಟಾರ್ ಗಳಿಗೆ ಪೈಪೋಟಿ ನೀಡುವಂತೆ, ಈ ಕಿರು ತೆರೆಯ ಧಾರವಾಹಿಗಳು ಸಹ ಜನರನ್ನು ಮೋಡಿ ಮಾಡಿ ಅವರ ಹೃದಯದಲ್ಲಿ ಮನೆ ಮಾಡಿದ್ದು ಸಂಜೇಯಾದ್ರೆ ಸಾಕು ಸೀರಿಯಲ್ ಕಥೆ ಸ್ಟಾರ್ಟ್ ಆಗಿ ಬಿಡುತ್ತೆ.
ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರೋ , ಜನಪ್ರಿಯ ಸೀರಿಯಲ್ ಗಳ ಪೈಕಿ , ನಾಗಿಣಿ ಸೀರಿಯಲ್ ಕೂಡ ಒಂದು ನಾಗಿಣಿ ಸೀರಿಯಲ್ ಅಂದ್ರೆ ಪ್ರತಿ ಮನೆ ಮನೆಯಲ್ಲೂ ಕೂಡ ಮಿಸ್ ಮಾಡದೇ ಜನರು ವೀಕ್ಷಣೆ ಮಾಡುತ್ತಿದ್ದರು. ಅಷ್ಟರ ಮಟ್ಟಿಗೆ ನಾಗಿಣಿ ಸೀರಿಯಲ್ ಜನಪ್ರಿಯತೆ ಗಳಿಸಿದೆ.
ಈ ಧಾರಾವಾಹಿಗಳು ಮುಖ್ಯ ಪಾತ್ರಧಾರಿ ನಾಗಿಣಿಯ ನಿಜವಾದ ಹೆಸರು , ನಿಮಗೆಲ್ಲಾ ಈಗಾಗ್ಲೆ ಗೊತ್ತಿರೋ ಹಾಗೆ ' ದೀಪಿಕಾ ದಾಸ್ ' ಹೌದು , ದೀಪಿಕಾ ದಾಸ್ ನಾಗಿಣಿ ಸೀರಿಯಲ್ ಗೆ ಬರುವುದಕ್ಕೂ ಮುನ್ನ ಹಲವಾರು ಸಿರಿಯಲ್ ಗಳಲ್ಲಿ ನಟಿಸಿ ಮನೆ ಮಾತಾಗಿದ್ದು ಸುಳ್ಳಲ್ಲ. ಬಿಗ್ ಬಾಸ್ ಸ್ಪರ್ಧಿಯಾಗಿಯೂ ದೀಪಿಕಾ ದಾಸ್ ಪ್ರೇಕ್ಷಕರಿಂದ ಹೆಚ್ಚಿನ ಮನ್ನಣೆ ಗಳಿಸಿದ್ದರು.
ನಾಗಿಣಿ ಸೀರಿಯಲ್ ಮೂಲಕ ತಮ್ಮ ಅಭಿನಯಕ್ಕೆ ಸಂಪೂರ್ಣವಾದ ನ್ಯಾಯವನ್ನ ಒದಗಿಸಿರುವ ನಟನೆಗೆ ಅದೆಷ್ಟೊ ಅಭಿಮಾನಿಗಳ ಬಳಗ ಹೊಂದಿರುವ ಇವರ ಸಂಭಾವನೆ ಎಷ್ಟು ಅಂತ ಕೇಳಿದ್ರೆ ಶಾಕ್ ಆಗ್ತಿರಾ ..
ಹೌದು ! ಇವರು ತನ್ನ ಒಂದು ಎಪಿಸೋಡಿಗೆ ಪಡೆಯುವ ಈಗಿನ ಸಂಭಾವನೆ ಬರೋಬ್ಬರಿ 12 ಸಾವಿರ ಅಂದ್ರೆ ತಿಂಗಳಿಗೆ ಲಕ್ಷ ಲಕ್ಷ ಹಣ ವನ್ನ ಸಂಪಾದಿಸ್ತಾರೆ ದೀಪಿಕಾ ದಾಸ್ .. ಯಾಕೆ ಅಂದ್ರೆ ಅವರೀಗ ಅತೀ ಬೇಡಿಕೆಯ ನಟಿಯೂ ಹಾಗಾಗಿ ಇವರ ಸಂಭಾವನೆಯೂ ಸಹ ಹೆಚ್ಚಿದೆ.
PublicNext
21/11/2020 08:53 am