ಈಗಾಗಲೇ 50 ಸಿನಿಮಾಗಳನ್ನು ಪೂರೈಸಿರುವ ನಟ ವಿಜಯರಾಘವೇಂದ್ರ ಮತ್ತೆ ಹೊಸ ಹೊಸ ಬಗೆಯ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಆ ಸಾಲಿನಲ್ಲಿ 'ಸಾವಿತ್ರಿ' ಸಿನಿಮಾ ಸೇರಿಕೊಂಡಿದ್ದು. ತಾವು ನಟಿಸುತ್ತಿರುವ ಚಿತ್ರಕ್ಕೆ ಸ್ವತಃ ವಿಜಯರಾಘವೇಂದ್ರ ಅವರೇ ಕ್ಲಾಪ್ ಮಾಡಿದ್ದಾರೆ.
ವಿಜಯ್ ರಾಘವೇಂದ್ರ ಜೊತೆ ತಾರಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ 'ಸಾವಿತ್ರಿ' ಸಿನಿಮಾ ತಂಡ ಒಟ್ಟು 45 ದಿನಗಳ ಶೂಟಿಂಗ್ ಪ್ಲ್ಯಾನ್ ಮಾಡಿಕೊಂಡಿದೆ. ಸಿನಿಮಾದಲ್ಲಿ ವಿಜಯರಾಘವೇಂದ್ರಗೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಆಸೆ ಇತ್ತಂತೆ. ಅದೇ ರೀತಿಯ ಕಥೆಗಳು ಅವರ ಹತ್ತಿರ ಬರುತ್ತಿರುವ ಕಾರಣ ಈ ಸಾವಿತ್ರಿ ಸಿನಿಮಾ ಒಪ್ಪಿದ್ದು, ಈ ಸಿನಿಮಾ ಮೂಲಕ ಬೇರೊಂದು ತರಹದ ಕಥೆಯನ್ನು ಪ್ರೇಕ್ಷಕನಿಗೆ ನೀಡಲಿದ್ದಾರಂತೆ.
ಈ ಚಿತ್ರದ ನಿರ್ದೇಶಕರಾಗಿ ಎಸ್.ದಿನೇಶ್ ಕಾರ್ಯ ಮಾಡುತ್ತಿದ್ದು, ಚಿತ್ರಕ್ಕೆ ಪ್ರಶಾಂತ್ ಕುಮಾರ್ ಬಂಡವಾಳ ಹೂಡಿದ್ದರೇ, ಗೀತೆ ರಚನೆಕಾರ ಹೃದಯಶಿವ ಈ ಸಿನಿಮಾ ಮೂಲಕ ಸಂಗೀತ ಸಂಯೋಜಕರಾಗಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಟ ನಿರ್ದೇಶಕ ಪ್ರಕಾಶ್ ಬೆಳವಾಡಿ, ಹಾಸ್ಯನಟ ಸಂಜು ಬಸಯ್ಯ, ಪ್ರಮೋದ್ ಮುಂತಾದವರು ಚಿತ್ರದಲ್ಲಿ ಮುಖ್ಯ ಪಾತ್ರಧಾರಿಗಳಾಗಿದ್ದಾರೆ.
ವಿಶೇಷವೆಂದರೆ ಈಗಾಗಲೇ ಸಾವಿತ್ರಿ ಬಾಯಿ ಪುಲೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ತಾರಾ ಮತ್ತೆ ಸಾವಿತ್ರಿ ಹೆಸರಿನ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
PublicNext
20/11/2020 05:24 pm