ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮತ್ತೊಂದು ಹೊಸ ಸಿನಿಮಾ ಸೈ ಎಂದಿದ್ದಾರೆ. 'ಮಠ' ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಅವರ ಗರಡಿಯಲ್ಲಿ ಪಳಗಿರುವ ಜಿ.ದೀಪಕ್ ಕುಮಾರ್ ಮೊದಲ ಬಾರಿಗೆ ನಿರ್ದೇಶನಕ್ಕೆ ಕಾಲಿಡುತ್ತಿರುವ ಈ ಸಿನಿಮಾದಲ್ಲಿ ನಾಯಕನಾಗಿ ಸಂಚಾರಿ ವಿಜಯ್ ಪಾತ್ರ ನಿರ್ವಹಿಸಲಿದ್ದಾರೆ.
ಈ ಹಿಂದೆ ನಿರ್ದೇಶಕ ದೀಪಕ್ ಮಲಯಾಳಂ ಪ್ರಸಿದ್ಧ ನಟಿ ಮೋಹನ್ ಲಾಲ್ ಹಾಗೂ ಮಮ್ಮುಟಿ ನಟನೆಯ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಜೊತೆಗೆ ಸಾಕ್ಷ್ಯಚಿತ್ರ ಹಾಗೂ ಜಾಹೀರಾತುಗಳನ್ನು ಸಹ ನಿರ್ದೇಶನ ಮಾಡಿ ಗೆದ್ದಿದ್ದಾರೆ.
ಸಂಚಾರಿ ವಿಜಯ್ ಮತ್ತು ನಿರ್ದೇಶಕ ದೀಪಕ್ ಸಿನಿಮಾದ ಟೈಟಲ್ "ಅವಸ್ಥಾಂತರ". ಹದಿಹರಿಯದ ಯುವಕನೊಬ್ಬನಿಗೆ ತನಗರಿವಿಲ್ಲದೆ ಜನ್ಮ ತಾಳುವ ಬಯಕೆಗಳು, ಕಾಮನೆಗಳು ಹೇಗೆ ಅವನನ್ನು ಜೀವನದಲ್ಲಿ ಅತಂತ್ರ ಸ್ಥಿತಿಗೆ ತಳ್ಳುತ್ತವೆ. ಮುಂದೆ ಇದರಿಂದ ನಾಯಕ ಯಾವ ಸಂಕಷ್ಟಕ್ಕೆ ಸಿಲುಕುತ್ತಾನೆ. ಅವನ ಅವಸ್ಥೆ ಏನಾಗುತ್ತೆ? ಯಾವ ಘಟನೆಗಳು ಸಂಭವಿಸುತ್ತವೆ? ಎನ್ನುವುದನ್ನು ಹಾಸ್ಯದ ಮಜಲಿನ ಮೂಲಕ 'ಅವಸ್ಥಾಂತರ' ಸಿನಿಮಾ ನಿರೂಪಣೆಗೊಳ್ಳುತ್ತದೆ.
ಸಂಚಾರಿ ವಿಜಯ್ ಈಗಾಗಲೇ ಬಿಡುಗಡೆಯಾಗಿರುವ 'ಆಕ್ಟ್ 1978' ಚಿತ್ರದಲ್ಲಿ ಕಮಾಂಡೋ ಪಾತ್ರದಲ್ಲಿ ನಟಿಸಿದ್ದು, ಇದಲ್ಲದೆ ಜಂಟಲ್'ಮನ್ ಚಿತ್ರದಲ್ಲಿ ಸಹ ವಿಜಯ್ ಪಾತ್ರವೊಂದನ್ನು ನಿಭಾಯಿಸಿದ್ದಾರೆ.
PublicNext
20/11/2020 03:28 pm