ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳವಾರ ರಜಾ ದಿನಾ ಸಿನಿಮಾ ಇದೇ ಡಿಸೆಂಬರ್ ಪ್ರೇಕ್ಷಕನ ಮಡಿಲಿಗೆ ಸೇರ್ಪಡೆ

ಮಂಗಳವಾರ ರಜಾದಿನ ಎಂಬ ಟೈಟಲ್ ಸಿನಿಮಾದ ಹಾಡು ಇದೇ ನವೆಂಬರ್ 24ಕ್ಕೆ ಬಿಡುಗಡೆಯಾಗಲಿದೆ. ನಿರ್ದೇಶಕ ಯೋಗರಾಜ್ ಭಟ್ ಬರೆದಿರುವ ಈ ಹಾಡಿಗೆ ಖ್ಯಾತ ಗಾಯಕ ವಿಜಯಪ್ರಕಾಶ್ ಧ್ವನಿ ನೀಡಿದ್ದಾರೆ. ಪ್ರಜೋತಾ ಡೇಸಾ ಸಂಗೀತ ಸಂಯೋಜಿಸಿರುವ ಈ ಗೀತೆ ಲಹರಿ ಮ್ಯೂಸಿಕ್ ಮೂಲಕ ಪ್ರೇಕ್ಷಕನನ್ನು ತಲುಪಲಿದೆ.

ಕ್ಷೌರಿಕನ ಬದುಕಿನ ಸುತ್ತ ಹೆಣೆಯಲಾಗಿರುವ ಕಥೆಯನ್ನು ಈ ಸಿನಿಮಾ ಹೊಂದಿದ್ದು, ಈ ಚಿತ್ರದ ಹಾಡು ಸಹ ಇದೀಗ ಸವಿತಾ ಸಮಾಜದವರ ಕೀರ್ತಿ ಸಾರುವ ರೀತಿಯಲ್ಲಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಯುವಿನ್.

ಈ ಚಿತ್ರದಲ್ಲಿ ನಾಯಕ ನಟನಾಗಿ ಕೆಮಿಸ್ಟ್ರಿ ಕರಿಯಪ್ಪ ಚಿತ್ರದ ಮೂಲಕ ನಾಯಕನಾಗಿ ಕಾಣಿಸಿಕೊಂಡ ಚಂದನ್ ಆಚಾರ ಪ್ರೇಕ್ಷಕರನ್ನ ಮೋಡಿ ಮಾಡಲಿದ್ದಾರೆ. ಅಂದಹಾಗೇ ಚಂದನ್ ಆಚಾರ್ ಈ ಚಿತ್ರದಲ್ಲಿ ಕ್ಷೌರಿಕನ ಪಾತ್ರ ನಿರ್ವಹಣೆ ಮಾಡಲಿದ್ದು, ಲಾಸ್ಯ ನಾಗಾರಾಜ್ ನಾಯಕಿಯಾಗಿ ಅವರ ಕೈ ಹಿಡಿಯಲಿದ್ದಾರೆ.

ತ್ರಿವರ್ಗ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯಕಂಡಿದ್ದು, ಬೆಂಗಳೂರು ಹಾಗೂ ಸುತ್ತ ಮುತ್ತಲಿನ ಪರಿಸರದಲ್ಲೇ ಹೆಚ್ಚಿನ ಸಿನಿಮಾ ಶೂಟಿಂಗ್ ಮಾಡಲಾಗಿದೆ. ಇನ್ನು ಈ ಸಿನಿಮಾದಲ್ಲಿ ಜಹಂಗೀರ್, ರಜನಿಕಾಂತ್ ಗೋಪಾಲ್ ದೇಶಪಾಂಡೆ, ನಂದನ ರಾಜ್, ಮುಂತಾದವರು ನಟಿಸಿದ್ದಾರೆ. ಬರುವ ತಿಂಗಳು ಡಿಸೆಂಬರ್ ನಲ್ಲೇ ಸಿನಿಮಾವನ್ನು ತೆರೆಗೆ ತರುವ ಸಿದ್ಧತೆಯಲ್ಲಿ ಸದ್ಯ ಸಿನಿಮಾ ತಂಡ ತೊಡಗಿ ಕೊಂಡಿದೆ.

Edited By : Nagaraj Tulugeri
PublicNext

PublicNext

19/11/2020 08:37 pm

Cinque Terre

46.3 K

Cinque Terre

0