ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಚ್ಚು ಪತ್ನಿಯ ಸಾಮಾಜಿಕ ಜಾಲತಾಣಗಳು ಹ್ಯಾಕ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಸಾಮಾಜಿಕ ಜಾಲತಾಣಗಳ ಖಾತೆ ಹ್ಯಾಕ್ ಆಗಿದೆ.

ಈ ಕುರಿತು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಸ್ವತಃ ವಿಜಯಲಕ್ಷ್ಮಿ ಅವರೇ ಖಚಿತಪಡಿಸಿದ್ದಾರೆ. ಆತ್ಮೀಯರೇ, ನನ್ನ ಸಾಮಾಜಿಕ ಜಾಲತಾಣಗಳ ಯಾವುದೇ ಖಾತೆಯಿಂದ ಆಕ್ಷೇಪಾರ್ಹ ಪೋಸ್ಟ್ ಅಥವಾ ಸಂದೇಶಗಳು ಬಂದಲ್ಲಿ ದಯವಿಟ್ಟು ಕ್ಷಮಿಸಿ. ಸಾಮಾಜಿಕ ಜಾಲತಾಣಗಳ ಖಾತೆಗಳು ಹ್ಯಾಕ್ ಆಗಿವೆ ಎಂದು ಬರೆದಿದ್ದಾರೆ.

ವಿಜಯಲಕ್ಷ್ಮಿ ದರ್ಶನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಹೆಚ್ಚು ಆಕ್ಟಿವ್ ಆಗಿದ್ದಾರೆ. ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಕುರಿತು ಅದರಲ್ಲಿ ಆಗಾಗ ಅಪ್‍ಡೇಟ್ ನೀಡುತ್ತಿರುತ್ತಾರೆ. ಆದರೆ ಇದೀಗ ಇದ್ದಕ್ಕಿದ್ದಂತೆ ಅಕೌಂಟ್ ಹ್ಯಾಕ್ ಆಗಿರುವ ಕುರಿತು ತಿಳಿಸಿ, ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

Edited By : Nagaraj Tulugeri
PublicNext

PublicNext

19/11/2020 04:25 pm

Cinque Terre

72.12 K

Cinque Terre

0