ಬೆಂಗಳೂರು- ಮಂತ್ರಾಲಯ ರಾಯರ ದರ್ಶನದ ಕಾಕತಾಳೀಯ ಘಟನೆಯನ್ನು ಇತ್ತೀಚೆಗೆ ನಟ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.ಈಗ ಮತ್ತೆ ತಮ್ಮ ತಂದೆ-ತಾಯಿಯ ಫೋಟೋ ಹಂಚಿಕೊಂಡು ಭಾವುಕರಾಗಿದ್ದಾರೆ.
ತಮ್ಮ ಸಿನಿಪಯಣಕ್ಕೆ 40 ವರ್ಷ ತುಂಬಿದ ಹಿನ್ನಲೆಯಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ತಂದೆ-ತಾಯಿಯ ಫೋಟೋ ಹಂಚಿಕೊಂಡಿರುವ ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ನಾನು ಉಂಡಲೆಯುವ ಹುಡುಗನಾಗಿದ್ದೆ. ಸ್ನೇಹಿತರ ಸಹವಾಸ ದೋಷದಿಂದ ಅಪಾಪೋಲಿಯಾಗಿ ಅಲೆಯುತ್ತಿದ್ದೆ. ಹೊಡೆದಾಟ, ಬಡಿದಾಟ ಮಡ್ತಾ ತಿಂಗಳುಗಟ್ಟಲೇ ಮನೆಗೆ ಬಾರದೇ ಹೊರಗೆ ಉಳಿಯುತ್ತಿದ್ದೆ. ನನ್ನ ತಂದೆ- ತಾಯಿ ಮಹಾ ದೈವಭಕ್ತರು. ಅಂತಹ ಅಮಾಯಕ ಜೀವಗಳಿಗೆ ಹಿರಿಯ ಮಗನಾಗಿದ್ದ ನಾನು ದಾರಿ ತಪ್ಪಿದ್ದೆ.
ಇದರಿಂದ ಅಪ್ಪ ರೋಸಿ ಹೋಗಿ ದಿನವೂ ಬಯ್ಯುತ್ತಿದ್ದರು. ಇಂತ ಮಗ ನನಗೆ ಬೇಡ. ಇವನಿಗೆ ಸಾವು ಕೊಡು ಎಂದು ಅಪ್ಪ ದೇವರಲ್ಲಿ ಮೊರೆ ಇಡುತ್ತಿದ್ದರು. ಒಂದು ದಿನ ಅಪ್ಪ ನನಗೆ ಬಯ್ಯುವುದನ್ನು ಕೇಳಲಾಗದೇ ಅಮ್ಮ ಹೋಗಿ ರೈಲು ಕಂಬಿ ಮೇಲೆ ಮಲಗಿದ್ದಳು. ವಿಷಯ ತಿಳಿದು ಅಲ್ಲಿ ಹೋದಾಗ, ಅಮ್ಮ ಇನ್ಮುಂದೆ ಜವಾಬ್ದಾರಿ ಕಲಿಯಬೇಕೆಂದು ಆಣೆ ಪ್ರಮಾಣ ಮಾಡಿಸಿಕೊಂಡಳು. ಕಿಸೆಯಲ್ಲಿ 500 ರುಪಾಯಿ ಇಟ್ಟು ಮಂತ್ರಾಲಯಕ್ಕೆ ಹೋಗುವಂತೆ ಹೇಳಿದಳು. ಅಲ್ಲಿ ಹೋದ ಮೇಲೆ ಮೂರು ತಿಂಗಳು ಅಲ್ಲೇ ಇದ್ದ ನನ್ನನ್ನು ಆ ಜಾಗ ಬದಲಾಸಿಬಿಟ್ಟಿತು. ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
PublicNext
19/11/2020 03:02 pm