ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ತಮ್ಮ ಹೆಸರನ್ನು ಎಳೆದುತಂದ ಯೂಟ್ಯೂಬರ್ ವಿರುದ್ಧ ನಟ ಅಕ್ಷಯ್ ಕುಮಾರ್ 500 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಯೂಟ್ಯೂಬರ್ ರಶೀದ್ ಸಿದ್ದಿಕಿ ಸುಶಾಂತ್ ಪ್ರಕರಣದ ಆರೋಪಿ ರಿಯಾ ಚಕ್ರವರ್ತಿ ಕೆನಡಾಕ್ಕೆ ಪರಾರಿಯಾಗಲು ಅಕ್ಷಯ್ ಕುಮಾರ್ ಸಹಾಯ ಮಾಡಿದ್ದರು ಎಂದು ಆರೋಪಿಸಿದ್ದರು. ಹೀಗಾಗಿ ಸಿದ್ದಿಕಿ ವಿರುದ್ಧ ಅಕ್ಷಯ್ ಕುಮಾರ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಸುಶಾಂತ್ ಪ್ರಕರಣದ ನಕಲಿ ಕಥೆಗಳ ಮೂಲಕ ಸಿದ್ದಿಕಿ ನಾಲ್ಕು ತಿಂಗಳಲ್ಲಿ 15 ಲಕ್ಷ ರೂ. ಗಳಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
PublicNext
19/11/2020 11:51 am