ಚಂದನವನದ ಖ್ಯಾತ ನಟ ಕೆ ಎಸ್ ಅಶ್ವಥ್ ಪುತ್ರ ಶಂಕರ್ ಅಶ್ವಥ್ ಸಹ ಪೋಷಕ ನಟನಾಗಿ ಖ್ಯಾತಿ ಗಳಿಸಿದ್ದಾರೆ. ಅಪ್ಪನ ಹಾಗೆ ಉತ್ತಮ ಸಿನಿಮಾಗಳನ್ನು ಮಾಡುತ್ತಿರುವ ಶಂಕರ್ ಅಶ್ವಥ್ ಇತ್ತೀಚಿಗಷ್ಟೆ ಬಹುನಿರೀಕ್ಷಿತ ಪೊಗರು ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ.
ಪೊಗರು ಸಿನಿಮಾದಲ್ಲಿ ಶಂಕರ್ ಅಶ್ವಥ್ ನಟಿ ರಶ್ಮಿಕಾ ಮಂದಣ್ಣ ಅವರ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಬಗ್ಗೆ ನಟ ಶಂಕರ್ ಅಶ್ವಥ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಮಗಳಾಗಿ ನಟಿಸಿದ್ದು, ನನ್ನ ಭಾಗ್ಯ ಎಂದು ಬರೆದುಕೊಂಡಿದ್ದಾರೆ.'ಪೊಗರು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನನ್ನ ಮಗಳಾಗಿ ನಟಿಸಿದ್ದು ನನ್ನ ಭಾಗ್ಯ. ಮಗಳ ಮಾತಿಗೆ ಬೆಲೆ ಕೊಟ್ಟು ಆಶೀರ್ವಾದಿಸಿದ ಕೊನೆಯ ಸನ್ನಿವೇಶ ಇಂದು ಚಿತ್ರೀಕರಣವಾಯಿತು. ಎರಡು ವರ್ಷಕ್ಕೂ ಮೀರಿ ನಡೆದ ಚಿತ್ರೀಕರಣ ಇಂದು ಮುಗಿಯಿತು.' ಎಂದು ಬರೆದುಕೊಂಡಿದ್ದಾರೆ.
PublicNext
18/11/2020 07:21 pm