ತಮ್ಮ 37ನೇ ವಯಸ್ಸಿನಲ್ಲಿಯೂ ಬಹುಬೇಡಿಕೆಯುಳ್ಳ ನಟಿ ತ್ರಿಷಾ. ಈಗಲೇ ಹಲವಾರು ಸಿನಿಮಾಗಳಲ್ಲಿ ಅವರಿಗೆ ಅವಕಾಶ ಹುಡುಕಾಡಿಕೊಂಡು ಬರುತ್ತಿವೆ. 2021ರಲ್ಲಿ ಅವರು ಮತ್ತಷ್ಟು ಬ್ಯುಸಿ ಆಗಲಿದ್ದಾರೆ.
ಈ ನಡುವೆ ಅವರ ಮದುವೆ ವಿಚಾರದ ಬಗ್ಗೆ ಸುದ್ದಿಯೊಂದು ಸದ್ದು ಮಾಡ್ತಾ ಇದೆ. ಅದೇನಂದ್ರೆ ತ್ರಿಷಾ ಅವರು ತಮ್ಮ ಮದುವೆ ಬಗ್ಗೆ ಸಂದರ್ಶನವೊಂದರಲ್ಲಿ ಮಾತಾಡಿದ್ದಾರೆ. ನನ್ನನ್ನು ಅರ್ಥ ಮಾಡಿಕೊಳ್ಳುವ ಹುಡುಗ ಸಿಕ್ಕರೆ ಖಂಡಿತ ಮದುವೆ ಆಗುತ್ತೇನೆ. ಅಲ್ಲಿವರೆಗೂ ಸಿಂಗಲ್ ಆಗಿರೋದಕ್ಕೆ ನನಗೇನೂ ಬೇಸರ ಇಲ್ಲ. ಅಕಸ್ಮಾತ್ ನಾನು ಬಯಸಿದಂತಹ ಹುಡುಗ ಸಿಗದೇ ಹೋದರೆ ಮದುವೆಯಾಗದೇ ಒಬ್ಬಂಟಿಯಾಗಿರಲು ನನಗೇನೂ ಬೇಸರ ಇಲ್ಲ ಎಂದು ಸಂದರ್ಶಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
PublicNext
17/11/2020 04:22 pm