ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊದ ಮೊದಲ್ ನೋಡಿದ 'ಸುಂದರ ಸ್ವಪ್ನಗಳು'

ನಟ ರಮೇಶ್ ಅರವಿಂದ್ ಚಿತ್ರರಂಗದಲ್ಲಿ 30 ವರ್ಷ ಮುಗಿಸಿದ್ದಾರೆ. ಆದರೂ ಈಗಲೂ ಅವರು ಚಾಕೊಲೇಟ್ ಬಾಯ್ ಕಂಡಂತೆ ಕಾಣುತ್ತಾರೆ. ಅಭಿಮಾನಿ ಯುವತಿಯರ ಮನದ ಮನೆಯಲ್ಲಿ ಸ್ಥಾನ ಪಡೆದಿದ್ದಾರೆ. ಕನ್ನಡದಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ರಮೇಶ್ ಅರವಿಂದ್, ಸುಂದರ ಸ್ವಪ್ನಗಳು ಸಿನಿಮಾದ ಮೂಲಕ ಕನ್ನಡ ಸಿನಿಮಾ ಪ್ರಿಯರ ಮುಂದೆ ಬಂದಿದ್ದಾರೆ. ಸದ್ಯ '100' ಎಂಬ ಸಿನಿಮಾದಲ್ಲಿ ರಮೇಶ್ ಅರವಿಂದ್ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್ ವುಡ್ ನ ತ್ಯಾಗರಾಜ ಎಂದೇ ಖ್ಯಾತಿಗಳಿಸಿರುವ ರಮೇಶ್ ಅರವಿಂದ್ ಅದ್ಭುತ ಕಲಾವಿದ ಜೊತೆಗೆ ಉತ್ತಮ ತಂತ್ರಜ್ಞ ಕೂಡ ಹೌದು. ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡುವ ಮೂಲಕ ನಿರ್ದೇಶಕನಾಗಿಯೂ ಸೈ ಎನಿಸಿಕೊಂಡಿದ್ದಾರೆ.

ನಟ ರಮೇಶ್ ಅರವಿಂದ್ ಕಾಲೇಜಿನಲ್ಲಿ ಓದುತ್ತಿರುವಾಗಲೆ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆಯುತ್ತಾರೆ. ಮೆಕಾನಿಕಲ್ ಇಂಜಿನಿಯರಿಂಗ್ ಓದುತ್ತಿದ್ದ ರಮೇಶ್ ಅರವಿಂದ್ 'ಸುಂದರ ಸ್ವಪ್ನಗಳು' ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಹ್ಯಾಂಡ್ ಸಮ್ ಆಗಿದ್ದ ರಮೇಶ್ ಅರವಿಂದ್ ನನ್ನು ನೋಡಿದ ನಿರ್ದೇಶಕ ಕೆ.ಬಾಲಚಂದರ್ ತಮ್ಮ ಸಿನಿಮಾಗೆ ಇವರೇ ನಾಯಕನಾಗಬೇಕೆಂದು ಸುಂದರ ಸ್ವಪ್ನಗಳು ಸಿನಿಮಾಗೆ ಆಯ್ಕೆ ಮಾಡುತ್ತಾರೆ.ಅಲ್ಲಿಂದ ಶುರವಾದ ರಮೇಶಗ ಅರವಿಂದ್ ಅರವ ಸಿನಿಪಯಣ ಇಂದಿಗೂ ಸಾಂಗವಾಗಿ ಸಾಗಿದೆ.

Edited By : Nagaraj Tulugeri
PublicNext

PublicNext

12/11/2020 02:55 pm

Cinque Terre

53.42 K

Cinque Terre

1

ಸಂಬಂಧಿತ ಸುದ್ದಿ