ಬೆಂಗಳೂರು: ಚಿರು-ಮೇಘನಾ ದಂಪತಿ ಪುತ್ರನಿಗೆ ಇಂದು ವಿಶೇಷ ದಿನ. ಸರ್ಜಾ ಕುಟುಂಬದಲ್ಲಿ ಆನಂದ ತಂದ ಜೂ.ಚಿರುಗೆ ಇಂದು ತೊಟ್ಟಿಲು ಶಾಸ್ತ್ರ.
ಇಂದು ಮಧ್ಯಾಹ್ನ 12 ಗಂಟೆಯ ಶುಭಗಳಿಗೆಯಲ್ಲಿ ಮೇಘನಾ ಪುತ್ರನ ತೊಟ್ಟಿಲು ಶಾಸ್ತ್ರ ನಡೆಯಲಿದೆ.
ಹಿರಿಯರು, ಕುಟುಂಬಸ್ಥರ ಸಮ್ಮುಖದಲ್ಲಿ ಆನಂದ ಹೊತ್ತು ತಂದ ಮಗುವನ್ನು ತೊಟ್ಟಿಲಿಗೆ ಹಾಕಿ ಶಾಸ್ತ್ರ ಮಾಡಲಾಗುತ್ತೆ.
ಕುಟುಂಬಸ್ಥರು ಬೆಳಿಗ್ಗೆಯಿಂದಲೇ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಚಿರು ಮಗನಿಗಾಗಿ ಗದಗದಿಂದ ಬಂತು ವಿಶೇಷ ತೊಟ್ಟಿಲು:
ಇನ್ನು ತೊಟ್ಟಿಲು ಶಾಸ್ತ್ರಕ್ಕಾಗಿ ಗದಗದ ಮಹಿಳಾ ಸಂಘದಿಂದ ಬಣ್ಣಗಳಿಂದ ಕೂಡಿರೋ ಹ್ಯಾಂಡ್ ಮೇಡ್ ತೊಟ್ಟಿಲು ಬಂದಿದೆ.
ಚಿರು, ಮೇಘನಾ ಪುತ್ರನಿಗಾಗಿ ಅಭಿಮಾನಿಗಳು ವಿಶೇಷ ತೊಟ್ಟಿಲನ್ನು ಉಡುಗೊರೆಯಾಗಿ ಕಳಿಸಿದ್ದಾರೆ.
PublicNext
12/11/2020 12:07 pm