ವಿಶಿಷ್ಟ ನಟನೆ, ಮುಗ್ಧ ನಗುವಿನಂದಲೇ ಕನ್ನಡಿಗರ ಮನಸು ಗೆದ್ದ ಚೆಂದುಳ್ಳಿ ಚೆಲುವೆ ನಟಿ ಯಾರಂದ್ರೆ ಅದು ಅನು ಪ್ರಭಾಕರ್. ಅವರ ನಟನೆಯ ಬಹುತೇಕ ಚಿತ್ರಗಳು ಸಕ್ಸಸ್ ಕಂಡಿವೆ. ಒಂದೇ ಒಂದು ವಿವಾದ ಇಲ್ಲದೇ ತಮ್ಮ ಸಿನಿ ಪಯಣವನ್ನ ಸರಾಗವಾಗಿ ಮಾಡಿಕೊಂಡು ಮುಂದೆ ಬಂದ ಅನು ಪ್ರಭಾಕರ್ ಅವರಿಗೆ ಇಂದು 40ನೇ ಹುಟ್ಟುಹಬ್ಬ.
ಈ ಬಗ್ಗೆ ಕೂಲ್ ಆಗಿ ಟ್ವೀಟ್ ಮಾಡಿರುವ ಅನು, 'ಹ್ಯಾಪಿ ಬರ್ತಡೇ ಟು ಮೀ' ಎಂದು ಬರೆಯುವ ಮೂಲಕ ತಮಗೆ ತಾವೇ ಶುಭಾಶಯ ಕೋರಿಕೊಂಡಿದ್ದಾರೆ.
ಈಗಾಗಲೇ ಅಭಿಮಾನಿಗಳು, ಸ್ನೇಹಿತರು, ಕುಟುಂಬಸ್ಥರು ಹಾಗೂ ಸಿನಿಮಾ ಮಂದಿಯಿಂದ ಅನುಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.
40 ವರ್ಷಗಳು ಸ್ಮರಣಯೋಗ್ಯ ಜೀವನವಾಗುವಂತೆ ಮಾಡಿದ ಪ್ರತಿಯೊಬ್ಬರಿಗೂ ನನ್ನ ವಂದನೆಗಳು ಎಂದು ಅನು ಪ್ರಭಾಕರ್ ಟ್ವೀಟ್ ಮಾಡಿದ್ದಾರೆ.
PublicNext
11/11/2020 09:19 am