ಈ ಪ್ರೀತಿಗಾಗಿ ಯುವಕರು ಮಾಡೋ ಕೆಲ್ಸಾ ಒಂದಾ ಎರೆಡು ಈ ಪಂಚತಂತ್ರ ಸಿನಿಮಾದಲ್ಲಿ ಪ್ರೀತಿಸಿದ ಹುಡುಗಿಗಾಗಿ ಯಂಗ್ ಹುಡಗ್ರೂ , ಸೀನಿಯರ್ಸ್ ರೇಸಿಂಗ್ ಕಾದಾಟದ ಸಿನಿಮಾ "ಪಂಚತಂತ್ರ" ಮೂಲಕ ಯಶಸ್ಸು ಬೆನ್ನಟ್ಟಿದ ನಟಿ ಸೋನಾಲ್ ಮಾಂತೆರೋ ಅವರನ್ನ ನಿರ್ದೇಶಕ ಯೋಗರಾಜ್ ಭಟ್ ನಮಗೆಲ್ಲಾ ಪರಿಚಯಿಸಿದ್ದು ನಿಮ್ಗೆ ಗೊತ್ತಿರೋ ವಿಚಾರ.
ಆ ಚಿತ್ರದ ನಂತರ ಮರೆಯಾಗಿದ್ದ ನಟಿ ಸೋನಾಲ್ ಮಾಂತೆರೋ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು ಮತ್ತೆ ತೆರೆಗೆ ಬರಲು ಕಾತುರದಲ್ಲಿದ್ದಾರೆ.
ಈಗಾಗಲೇ ಬಿಡುಗಡೆ ನಿರೀಕ್ಷೆಯಲ್ಲಿರುವ 'ರಾಬರ್ಟ್' 'ಬನಾರಸ್' ಸಿನಿಮಾ ಮೂಲಕ ಪ್ರೇಕ್ಷಕರನ್ನು ತಲುಪಲಿರುವ ಸೋನಾಲ್ ಮಾಂತೆರೋ.
ಸದ್ಯ ಬುದ್ಧಿವಂತ-2, ನಟ್ವರ್ ಲಾಲ್, ತಲ್ವಾರ್ ಪೇಟೆ, ಚಿತ್ರಗಳು ಶೂಟಿಂಗ್ ಒಳಗೆ ತೊಡಗಿದ್ದಾರೆ. ಇದಲ್ಲದೆ ಲವ್ ಮಾಕ್ ಟೇಲ್ ಯಶಸ್ಸಿನ ನಂತರ ಲವ್ ಮಾಕ್ ಟೇಲ್-2 ಸಿನಿಮಾದಲ್ಲಿರುವ ಡಾರ್ಲಿಂಗ್ ಕೃಷ್ಣನಿಗೆ ಜೋಡಿಯಾಗಿ 'ಶುಗರ್ ಪ್ಯಾಕ್ಟರಿ' ಸಿನಿಮಾದ ಅಭಿನಯಕ್ಕೆ ಮುಂದಾಗಿದ್ದಾರೆ.
ಶುಗರ್ ಫ್ಯಾಕ್ಟರಿ ಚಿತ್ರದಲ್ಲಿ ಹೊಸ ಪಾತ್ರ ಅಭಿನಯದ ಸೋನಾಲ್ ಮಾಂತೆರೋ ಐಟಿ ಪ್ರೋಪೆಷನಲ್ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
"ನೋ ಲವ್, ನೋ ಮ್ಯಾರೇಜ್ ಜಸ್ಟ್ ಎಂಜಾಯ್ ಲೈಪ್" ಎಂಬ ಪಾಲಿಸಿ ಇಟ್ಟಿಕೊಂಡಿರುವ ಹುಡುಗಿ ಪಾತ್ರ ನಿಭಾಯಿಸಲು ಸಜ್ಜಾಗಿದ್ದಾರೆ.
ಅಭಿಸಾರಿಕೆ ಸಿನಿಮಾ ಮೂಲಕ ಬೆಳ್ಳಿ ತೆರೆ ಪ್ರವೇಶಿಸಿ ಭಟ್ಟರ್ ಪಂಚತಂತ್ರ ಸಿನಿಮಾ ಮೂಲಕ ಚಂದನವನದಲ್ಲಿ ಗೆದ್ದ 'ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ' ಎಂಬ ಹಾಡಿನ ಸೋನಾಲ್ ಮಾಂತೆರೋ ಹಾಟ್ ಅಭಿನಯ ಪಡ್ಡೆ ಹುಡುಗರನ್ನು ಇನ್ನು ಕಾಡುತ್ತಿದೆ.
PublicNext
09/11/2020 06:54 pm