ಬೆಂಗಳೂರು: ಅನ್ ಲಾಕ್ ಪ್ರಕ್ರಿಯೆ ಆರಂಭವಾದ ಮೇಲೆ ಕೆಲವು ಕೊರೊನಾ ನಿರ್ಬಂಧಗಳ ನಡುವೆ ಪ್ರವಾಸಿ ತಾಣಗಳಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಜನಸಾಮಾನ್ಯರು ಸೇರಿದಂತೆ ಸೆಲೇಬ್ರಿಟಿಗಳು ಪ್ರವಾಸಿ ತಾಣಗಳ ಮಸ್ತ್ ಮಜಾ ಮಾಡುತ್ತಿದ್ದಾರೆ.
ಮನೆಯಲ್ಲೊಮ್ಮೆ ಸಿಂಪಲ್ಲ ಬರ್ಥ ಡೇ ಮಾಡಿಕೊಂಡ ಜೂ. ಯಶ್ ಗೋವಾ ಹಡುಗಿನಲ್ಲಿ ಮತ್ತೊಮ್ಮೆ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ವಿಶೇಷ.
ತಮ್ಮದೇ ಶೈಲಿಯಲ್ಲಿ ಯಶ್ ಕುಟುಂಬ ಗೋವಾ ಬೀಚ್ ನಲ್ಲಿ ಹಡಗಿನಲ್ಲಿ ಅದ್ಧೂರಿಯಾಗಿ ಕೇಕ್ ಕಟ್ ಮಾಡಿ ಯಥರ್ವ್ ಬರ್ಥ ಡೇ ಸಂಭ್ರಮಿಸಿದ್ದಾರೆ.
ಈ ವಿಡಿಯೋವನ್ನು ನಟಿ ರಾಧಿಕಾ ಪಂಡಿತ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ತಮ್ಮ ಇಬ್ಬರು ಮಕ್ಕಳನ್ನು ಎತ್ತಿಕೊಂಡು ಸಂಭ್ರಮಿಸಿದ್ದಾರೆ.
ರಾಧಿಕಾ ಪಂಡಿತ್ ಡಿಯೋ ಪೋಸ್ಟ್ ಮಾಡಿ ಸಂಭ್ರಮ ಹಂಚಿಕೊಂಡಿದ್ದು, ನೀನು ಈ ಕೇಕ್ ನ ಫ್ಲೇವರ್ ನ್ನು ನೆನಪಿಟ್ಟುಕೊಳ್ಳುವುದಿಲ್ಲ, ಈ ದಿನ ಏಕೆ ವಿಶೇಷ ಎಂದು ಸಹ ನಿನಗೆ ತಿಳಿಯುವುದಿಲ್ಲ.
ಆದರೆ ಹೆತ್ತವರಾದ ನಮಗೆ ಜೀವನದಲ್ಲಿ ಆಚರಿಸಬೇಕಾದ ಸಂಭ್ರಮವಾಗಿದೆ. ಇಂತಹ ಅದ್ಭುತ ಸಂತೋಷ ಉಂಟಾಗಿ ಇಂದಿಗೆ ಒಂದು ವರ್ಷ ಕಳೆದಿದೆ.
ಹ್ಯಾಪಿ ಬರ್ತ್ ಡೇ ಎಂದು ಬರೆದು ಹಾರ್ಟ್ ಸಿಂಬಲ್ ಮೂಲಕ ತಮ್ಮ ಮಗನಿಗೆ ರಾಧಿಕಾ ಮತ್ತೊಮ್ಮೆ ಶುಭಾಶಯ ತಿಳಿಸಿದ್ದಾರೆ.
ಹಡಗಿನಲ್ಲಿ ಸಮುದ್ರದ ಮಧ್ಯೆ ತೆರಳಿ ಜಾಲಿ ರೈಡ್ ಮೂಲಕ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಸಮುದ್ರ, ಬೀಚ್ ಎಂದರೆ ರಾಧಿಕಾ ಪಂಡಿತ್ ಅವರಿಗೆ ತುಂಬಾ ಇಷ್ಟ ಎಂದು ಈ ಹಿಂದೆ ರಾಖಿ ಭಾಯ್ ತಿಳಿಸಿದ್ದಾರೆ.
PublicNext
07/11/2020 10:20 am