ಕನ್ನಡ ಚಿತ್ರರಂಗದ ಆರಡಿ ಕಟೌಟ್ ಕಿಚ್ಚ ಸುದೀಪ್ ಕನ್ನಡ ಮಾತ್ರವಲ್ಲದೆ ಬಾಲಿವುಡ್, ಟಾಲಿವುಡ್, ಕಾಲಿವುಡ್ ಸೇರಿದಂತೆ ಬಹು ಭಾಷೆಗಳಲ್ಲಿ ನಟಿಸಿ ಅಪಾರವಾದ ಅಭಿಮಾನ ಬಳಗ ಹೊಂದಿದ್ದಾರೆ. ಅಷ್ಟೇ ನಾಜೂಕಾಗಿ ಯಾವುದೇ ಪಾತ್ರ ನಿಭಾಯಿಸಬಲ್ಲ ಕಲಾವಿದ ಕೂಡ ಹೌದು.
ಈದೀಗ ಅಂತಹುದೇ ಒಂದು ಆಫರ್ ಕಿಚ್ಚನನ್ನ ತೆಲುಗಿನಿಂದ ಹುಡಿಕಿಕೊಂಡು ಬಂದಿದೆ. ಪವನ್ ಕಲ್ಯಾಣ್ ನಟನೆಯ ಸಿನಿಮಾವನ್ನು ತೆಲುಗಿನ ಕ್ರಿಷ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 'ವಿರೂಪಾಕ್ಷ' ಎಂಬುದು ಚಿತ್ರದ ಹೆಸರಾಗಿದ್ದು, ಮಲಿಯಾಳಂನ ಜನಪ್ರಿಯ ಸಿನಿಮಾ "ಅಯ್ಯಪ್ಪನುಮ್ ಕೋಶಿಯುಮ್" ರಿಮೇಕ್ ಆಗಿದೆ. ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ ಪೊಲೀಸ್ ಪಾತ್ರದಲ್ಲಿ ನಟಿಸಲಿದ್ದು ಸುದೀಪ್ ಕೋಶಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಇದೇ ಪಾತ್ರವನ್ನು ಮಲಿಯಾಳಂದಲ್ಲಿ ಪೃಥ್ವಿರಾಜ್ ನಿರ್ವಹಿಸಿದ್ದರು.
ಈ ಸಿನಿಮಾದಲ್ಲಿ ಅಹಂಗಾಗಿ ಹೋರಾಡುವ ಕಥೆಯಲ್ಲಿ ಅಭಿನಯಕ್ಕೆ ಎಲ್ಲಿಲ್ಲದ ಪ್ರಾಮುಖ್ಯತೆ ಇದ್ದು ಅದರಲ್ಲೂ ಈ ಅಭಿನಯ ಚಕ್ರವರ್ತಿ ಸುದೀಪ್ ಪವನ್ ಕಲ್ಯಾಣ್ ಪರಸ್ಪರ ಎದುರಾಗಿ ನಿಂತರೆ ಸಿನಿಮಾ ಮತ್ತಷ್ಟು ವೇಟೆಜ್ ಪಡೆದುಕೊಳ್ಳಲಿದೆ.
ಆದರೆ ಚಿತ್ರತಂಡ ಈ ಬಗ್ಗೆ ಸುದೀಪ್ ನಟನೆಯ ಬಗ್ಗೆ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲವಾದರೂ ಕೆಲ ಮೂಲಗಳು ಇದು ನಿಜ ಎನ್ನುತ್ತಿವೆ. ಈಗಾಗಲೇ ಸುದೀಪ್ ನಟನೆಯ ಅನೂಫ್ ಭಂಡಾರಿ ನಿರ್ದೇಶನದ ಪ್ಯಾಟಂ, ಬಿಲ್ಲ ರಂಗ ಭಾಷಾ, ಅಶ್ವತ್ಥಾಮ್ ಸಿನಿಮಾಗಳು ರವಿಚಂದ್ರನ್ ನಿರ್ದೇಶನದ ರವಿ ಬೋಪಣ್ಣ, ಶಿವ ಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ-3 ಸಿನಿಮಾಗಳು ಸಹ ತೆರೆಗೆ ಬರಲು ಸಿದ್ಧವಾಗುತ್ತಿವೆ.
PublicNext
05/11/2020 08:48 pm