ಬೆಂಗಳೂರು: ಬಹುವರ್ಷಗಳಿಂದ ಖಾಲಿ ಬಿದ್ದ ಗದ್ದೆಗಳಲ್ಲಿ ಉಡುಪಿ ಶಾಸಕ ರಘುಪತಿ ಭಟ್ ಮತ್ತೆ ಕೃಷಿ ಮಾಡಲು ಅಭಿಯಾನ ಶುರು ಮಾಡಿದ್ದರು. ಕಳೆದ ವರ್ಷ ನಡೆದ ಈ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. ಹಡಿಲು ಭೂಮಿ ಕೃಷಿ ಅಭಿಯಾನದ ಬಗ್ಗೆ ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾಂತಾರ ಚಿತ್ರದ ಯಶಸ್ಸಿನ ಹಿನ್ನೆಲೆ ಇತ್ತೀಚೆಗೆ ಖಾಸಗಿ ವಾಹಿನಿಯೊಂದು ನಡೆಸಿದ ಸಂದರ್ಶನದಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಹಡಿಲು ಕೃಷಿ ಅಭಿಯಾನದ ಬಿತ್ತನೆಗೆ ಶಾಸಕ ರಘುಪತಿ ಭಟ್ ಅವರು ರಕ್ಷಿತ್ ಶೆಟ್ಟಿ ಅವರನ್ನು ಕರೆಸಿದ್ದರು. ಅದರ ಕಳೆ ತೆಗೆಯಲು ನನ್ನನ್ನು ಕರೆಸಿದ್ದರು. ಆ ಮೂಲಕ ಜನರು ಸೇರಲಿ ಎಂಬುದು ಅವರ ಉದ್ದೇಶವಾಗಿತ್ತು ಎಂದು ರಿಷಭ್ ಶೆಟ್ಟಿ ಆಗಿನ ಸನ್ನಿವೇಶವನ್ನು ನೆನಪಿಸಿಕೊಂಡಿದ್ದಾರೆ.
ಹೀಗೆ ಹಲವಾರು ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳನ್ನು ಅವರು ಮಾಡ್ತಿದ್ದಾರೆ. ಗ್ರಾಮೀಣ ಭಾಗದ ಮಕ್ಕಳಿಗೆ ಉಚಿತವಾಗಿ ಯಕ್ಷಗಾನ ಕಲಿಸುವ ಕೆಲಸವನ್ನೂ ಅವರು ಮಾಡ್ತಿದ್ದಾರೆ. ಸದ್ಯದ ನಮ್ಮ ಶಿಕ್ಷಣ ಕೌಶಲ್ಯಾಧಾರಿತವಾಗಿ ಸಿಗುವಂತಾಗಬೇಕು. ಅದಕ್ಕಾಗಿ ಗುರುಕುಲ ಮಾದರಿಯ ಶಿಕ್ಷಣ ಪದ್ಧತಿ ನಮ್ಮಲ್ಲಿ ಮತ್ತೆ ಬರಬೇಕು ಎಂದು ರಿಷಭ್ ಶೆಟ್ಟಿ ಇದೇ ವೇಳೆ ಹೇಳಿದ್ದಾರೆ.
PublicNext
10/10/2022 09:28 pm