ಕಿರಿಕ್ ನಟಿ ಸಂಯುಕ್ತಾ ಹೆಗಡೆ ವೈಯಕ್ತಿಕ ಜೀವನದಲ್ಲೂ ಭಿನ್ನ. ಸಿನಿಮಾದಲ್ಲೂ ವಿಭಿನ್ನ. ಇತ್ತೀಚೆಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಅಭಿಮಾನಿಗಳು ಕೇಳಿದ ಕೆಲವು ಪ್ರಶ್ನೆಗಳಿಗೆ ಸಂಯುಕ್ತಾ ಉತ್ತರ ನೀಡಿದ್ದಾರೆ.
ಆಧುನಿಕ ಶೈಲಿಯ ನೃತ್ಯವನ್ನು ಅದ್ಭುತವಾಗಿ ಕಲಿತಿರುವ ಸಂಯುಕ್ತಾ ಹೆಗಡೆ ಇತ್ತೀಚೆಗೆ ಬೆಂಗಳೂರಿನ ಉದ್ಯಾನವೊಂದರಲ್ಲಿ ಕರ್ಕಶ ಸಂಗೀತ ಹಚ್ಚಿಕೊಂಡು ಡ್ಯಾನ್ಸ್ ಮಾಡಿದ್ದಾರೆಂಬ ಕಾರಣಕ್ಕೆ ಸ್ಥಳೀಯರ ಆಕ್ರೋಶಿತರಾಗಿದ್ದರು. ಅದು ಈಗ ಹಳೆ ಕತೆ.
ಆದ್ರೆ ಸದ್ಯದ ಆಸಕ್ತಿಕರ ವಿಚಾರ ಅಂದ್ರೆ ನಟಿ ಸಂಯುಕ್ತಾ ಹೆಗಡೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಅಭಿಮಾನಿಯ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ತನ್ನ ಅಪ್ಪ ಅಮ್ಮ ಅಂತರ್ಧರ್ಮೀಯರು ಎಂದು ಹೇಳಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಕೇಳಿ ಬಂದ ಪ್ರಶ್ನೆ ಇದಾಗಿತ್ತು. ಅಂತರ್ಧರ್ಮೀಯರಾದ ನನ್ನ ಪೋಷಕರು ಮನೆಯಲ್ಲಿ ಎಲ್ಲ ಧರ್ಮಗಳ ಹಬ್ಬಗಳನ್ನು ಸಮನಾಗಿ ಆಚರಿಸುತ್ತಾರೆ. ಈ ರೀತಿ ಹಬ್ಬಗಳನ್ನು ಆಚರಿಸುವುದರಿಂದ ನಮಗೆ ಖುಷಿ ಇದೆ ಎಂದು ಸಂಯುಕ್ತಾ ಹೆಗಡೆ ಉತ್ತರಿಸಿದ್ದಾರೆ.
PublicNext
04/11/2020 12:12 pm