ನಿಖಿತಾ ತುಕ್ರಾಲ್ ಎಂಬ ನಟಿ ಯಾರಿಗೇನೂ ಕಮ್ಮಿ ಇಲ್ಲ ಎಂಬಂತಿದ್ದವರು. ನಟ ಪುನೀತ್ ರಾಜಕುಮಾರ್, ದರ್ಶನ್, ಜಗ್ಗೇಶ್ ಜೊತೆಯಾಗಿ ಇವರು ನಟಿಸಿದ ಸಿನಿಮಾಗಳು ಸೂಪರ್ ಹಿಟ್ ಪ್ರದರ್ಶನ ಕಂಡಿವೆ.
ಬಿಗ್ ಬಾಸ್ ಮೊದಲ ಸೀಸನ್ ನ ಫೈನಲಿಸ್ಟ್ ಕೂಡ ಆಗಿದ್ದ ನಿಖಿತಾ ಮದುವೆ ನಂತರ ನಟನೆಯಿಂದ ಸ್ವಲ್ಪ ದೂರ ಉಳಿದಿದ್ದರು. ಈಗ ಮತ್ತೆ ಕ್ಯಾಮೆರ ಮುಂದೆ ಬರಲು ತಯಾರಾಗಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿರುವ ಅವರು ನನ್ನ ಮೊದಲ ಪ್ರೀತಿಯನ್ನು ಪಡೆಯಲು ವಾಪಸ್ ಬರ್ತಿದ್ದೇನೆ ಎಂದಿದ್ದಾರೆ.
PublicNext
03/11/2020 05:50 pm