ಈ ಹಿಂದೆ ನಟ ದರ್ಶನ್ ಅಭಿನಯಿಸಲಿದ್ದಾರೆ ಎಂಬ ಸಿನಿವೊಂದರಲ್ಲಿ ಶ್ರೀಮುರಳಿ ಎಂಂಟ್ರೀಕೊಟ್ಟಿದ್ದು ಆ ಮೂಲಕ ಬಹು ನಿರೀಕ್ಷಿತ ಸಿನಿಮಾ "ಮದಗಜ" ಸಿನಿಮಾ ಯಶಸ್ಸಿಗೆ ನಿರ್ದೇಶಕರು ಪಟತೊಟ್ಟಿದ್ದು ಯಶಸ್ಸಿನ ಚಿತ್ರಣ ಕಣ್ಮುಂದೆ ಇಟ್ಟುಕೊಂಡು ಚಿತ್ರದ ಕಾರ್ಯ ಆರಂಭಿಸಿದ್ದಾರೆ.
ಈ ಹಿಂದೆ ಸಾಹಸಿಂಹ ವಿಷ್ಣುವರ್ಧನ್ ಅಭಿನಯದ ಪ್ರೇಮೋತ್ಸವ ಚಿತ್ರದಲ್ಲಿ ನಾಯಕಿಯಾಗಿದ್ದ ದೇವಯಾನಿ ಅವರಿಗೆ ಮದಗಜ ಸಿನಿಮಾ ತಂಡ ರೆಡ್ ಕಾರ್ಪೇಟ್ ಹಾಕಿದ್ದು ಮದಗಜನಿಗೆ ತಾಯಿಯಾಗಿ ನಟಿಸಲು ನಿರ್ದೇಶಕರು ಆಫರ್ ನೀಡಿದ್ದಾರೆ.
ಮತ್ತೇ ಬಹಳ ವರ್ಷಗಳ ನಂತರ ಸಿಗುತ್ತಿರುವ ಕನ್ನಡದ ಅವಕಾಶಕ್ಕೆ ದೇವಯಾನಿ ಖುಷ್ ಆಗಿದ್ದು ಈ ಚಿತ್ರದಲ್ಲಿ ಸಿಗುವ ಪಾತ್ರ ನನ್ನನ್ನು ಮತ್ತಷ್ಟು ಕನ್ನಡಿಗರಿಗೆ ಕನೆಕ್ಟ್ ಮಾಡುತ್ತೇ ಎಂದಿದ್ದಾರೆ.
ಈ ಹಿಂದೆ ಮದುವೆ, ಮನೆ, ಮಕ್ಕಳು, ಎಂದು ಚಿತ್ರರಂಗದಿಂದ ದೂರ ಸರಿದಿದ್ದ ದೇವಯಾನಿ ಮಕ್ಕಳು ದೊಡ್ಡವರಾದ ಮೇಲೆ ಮತ್ತೆ ತೆರೆಗೆ ಬಂದು ನಟನೆಗೆ ವಾಲಿರುವ ವಿಷಯ ತಿಳಿಸಿದ್ದು ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ ಸೆಟ್ ಸೆರಲಿದ್ದಾರೆ, ಈಗಾಗಲೇ ಶ್ರೀ ಮುರಳಿ ನಟನೆಯ ಉಗ್ರಂ ವೀರಂ, ಯಜ್ಞ, ನಂದೇ, ಪರಬ್ರಹ್ಮ ಸಿನಿಮಾಗಳು ಹೊಸ ವರ್ಷಕ್ಕೆ ಸಹ ತೆರೆ ಬರುವ ಕಾತುರದಲ್ಲಿವೆ.
PublicNext
02/11/2020 03:40 pm