ಕನ್ನಡ ಚಿತ್ರರಂಗದ ಹೈ ಕ್ಲಾಸ್ ಟ್ರೇಂಡ್ ಸೃಷ್ಟಿಸಿದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಕ್ಸಸ್ ಕಂಡು ಸ್ವಾಂಡಲವುಡ್ ಜೊತೆ ತೆಲುಗಿಗೂ ಕಾಲಿಟ್ಟಿರುವ ನಟಿ ರಶ್ಮಿಕಾ ಸದ್ಯ ಸಿನಿಮಾಗಳಲ್ಲಿ ಸಖತ್ ಬ್ಯುಸಿ ಆಗಿದ್ದಾರೆ.
ಈ ಮೊದಲೇ ತೆಲುಗಿನ ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಬಿಜಿ ಇದ್ದ ರಶ್ಮಿಕಾ ಕೊರೊನಾ ವೈರಸ್ ಲಾಕ್ ಡೌನ್ ಬಳಿಕ ಬರೋಬ್ಬರಿ ನಾಲ್ಕು ಸಿನಿಮಾ ಒಪ್ಪಿಕೊಂಡಿರುವ ಅವರು ನಟ ಶರ್ವಾನಂದ ಜೊತೆಗೆ ರಶ್ಮಿಕಾ ಅಭಿನಯಿಸುತ್ತಿರುವ ಚಿತ್ರ ಸೋಮವಾರ ಆರಂಭವಾಗಿದೆ.
ಇನ್ನು ಮಹೇಶ್ ಬಾಬು, ಅಲ್ಲು ಅರ್ಜುನ್ ರಂತಹ ಸ್ಟಾರ್ ನಟರು ಜೊತೆ ನಟಿಸಿರುವ ರಶ್ಮಿಕಾ 'ಆಚಾರ್ಯ' ಚಿತ್ರದ ಮೂಲಕ ರಾಮ್ ಚರಣ್ ತೇಜಾ ಗೆ ನಾಯಕಿಯಾಗಿ ನಟಿಸುತ್ತಿರುವ ಸುದ್ಧಿ ಇದ್ದು ನಾಗಾರ್ಜುನ ಅವರ ಎರಡನೇಯ ಮಗ ಅಖಿಲ್ ಅಭಿನಯದ ಚಿತ್ರ ನಾನಿ ಅಭಿನಯದ 'ಶ್ಯಾಮ್ ಸಿಂಗ್ ರಾವ್' ಚಿತ್ರಕ್ಕೆ ನಾಯಕಿಯಾಗುವ ಸಾಧ್ಯತೆಗಳಿವೆ.
ಶರ್ವಾನಂದ ಅಭಿನಯದ ಇನ್ನೊಂದು ಚಿತ್ರ 'ಅಡಾಳ್ಳು ಮೀಕು ಜೋಹ್ರಾಲು' ಚಿತ್ರಕ್ಕೂ ರಶ್ಮಿಕಾ ಆಯ್ಕೆಯಾಗಿದ್ದಾರೆ ವಿಶೇಷವೆಂದರೇ ಈ ಚಿತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಾರೆಂಬ ಸುದ್ಧಿ ಇತ್ತು ಇದೀಗ ಅವರ ಬದಲಾಗಿ ರಶ್ಮಿಕಾ ಬಂದಿದ್ದಾರೆ. ಈಗಾಗಲೇ ರಶ್ಮಿಕಾ ಅಭಿನಯದ ಪುಷ್ಪಂ, ಪೊಗರು, ಸುಲ್ತಾನ್ ಚಿತ್ರಗಳು ಸಹ ಪ್ರೇಕ್ಷಕರನ್ನ ತಲುಪುವ ಹಂತದಲ್ಲಿವೆ.
PublicNext
30/10/2020 03:40 pm