ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗನಿಗೆ ದೃಷ್ಟಿಯಾಗಿದ್ದಾರೆ ನಟಿ ಹೇಮಾ ಚೌಧರಿ

70-80ರ ದಶಕವನ್ನು ಕನ್ನಡ ಚಿತ್ರರಂಗದ ಸುವರ್ಣ ಕಾಲ ಎನ್ನಬಹುದು. ಆ ವೇಳೆ ಸಾಲು ಸಾಲು ಸೂಪರ್ ಹಿಟ್ ಚಿತ್ರಗಳು ಬಂದವು.

ಆ ಚಿತ್ರಗಳು ಈಗಲೂ ಜನಪ್ರಿಯತೆ ಹೊಂದಿವೆ. ಅಂತಹ ಚಿತ್ರಗಳಲ್ಲಿ ನಟಿಸಿದ ನಟ-ನಟಿಯರು ಕೂಡ ಕನ್ನಡಿಗರ ನೆನಪಲ್ಲಿ ಈಗಲೂ ಇದ್ದಾರೆ. ಅದರಲ್ಲಿ ಪ್ರಮುಖವಾಗಿ ಬರುವ ನಟಿ ಹೇಮಾ ಚೌಧರಿ.

ಹೌದು. ತಮ್ಮ ಮಾದಕ ನೋಟ, ವಿಶಿಷ್ಟ ನಟನೆ, ಮೂಲಕ ಕನ್ನಡ ಚಿತ್ರರಂಗದಲ್ಲಿ ಮಿಂಚಿದವರು ನಟಿ ಹೇಮಾ ಚೌಧರಿ. ಹೀರೋಯಿನ್ ಆಗಿಯೂ ಸೈ, ಸೈಡಲ್ಲೂ ಸೈ, ಪೋಷಕ ಪಾತ್ರಕ್ಕೂ ಸೈ, ಜೊತೆಗೆ ಲೇಡಿ ವಿಲನ್ ಆಗಿಯೂ ಸೈ ಎನಿಸಿಕೊಂಡಿದ್ದ ಹೇಮಾ, ದೊರೈ-ಭಗವಾನ್ ನಿರ್ದೇಶನದ 'ಗಾಳಿಮಾತು' ಚಿತ್ರದಲ್ಲಿ ಲೇಡಿ ವಿಲನ್ ಪಾತ್ರ ಮಾಡುವ ಮೂಲಕ ಆಗಿನ ಕಾಲೇಜು ಹುಡುಗರ ಹೃದಯಕ್ಕೆ ಲಗ್ಗೆ ಇಟ್ಟಿದ್ದರು.

ಇಂತಹ ವರ್ಣರಂಜಿತ ಸಿನಿಮಾ ಹಿನ್ನಲೆಯ ನಟಿ ಹೇಮಾ ಚೌಧರಿ ಅವರ ವೈಯಕ್ತಿಕ ಬದುಕು ನೋವಿನಿಂದ ಕೂಡಿದೆ. ಅದೇನೆಂದರೆ ಅವರ ಪ್ರೇಮದ ಪುತ್ರನಿಗೆ ದೃಷ್ಟಿ ಇಲ್ಲ.

ನಿಜ ಕಣ್ರೀ..ವಿಶಿಷ್ಟ ಕತೆಗಳನ್ನು ಹೇಳಬಲ್ಲಷ್ಟು ಪ್ರತಿಭೆ ಇರುವ ಹೇಮಾ ಅವರ ಪುತ್ರ ಪುರೋಹಿತ್ ಅವರಿಗೆ ದೃಷ್ಟಿ ದೋಷವಿದೆ. ದೇಶ ವಿದೇಶಗಳಲ್ಲಿ ಇದಕ್ಕೆ ಚಿಕಿತ್ಸೆ ಕೊಡಿಸಿದರೂ ಗುಣವಾಗಿಲ್ಲ ಎನ್ನಲಾಗಿದೆ.

ಹೀಗಾಗಿ ನಟಿ ಹೇಮಾ ಚೌಧರಿ ತಾವೇ ಸ್ವತಃ ತಮ್ಮ ಮಗನ ಕಣ್ಣಿಗೆ ದೃಷ್ಟಿಯಂತಿದ್ದಾರೆ. ಪುತ್ರ ಪುರೋಹಿತ್ ಇದೇ ಕಾರಣಕ್ಕೆ ಚಿತ್ರರಂಗಕ್ಕೆ ಬಂದಿಲ್ವಾ? ಎನ್ನುವ ಪ್ರಶ್ನೆಗಳು ಎದ್ದಿವೆ.

ಸದ್ಯ ಕಿರುತೆರೆ ಹಾಗೂ ಹಿರಿತೆರೆಯ ಪೋಷಕ ಪಾತ್ರಗಳಲ್ಲಿ ಬ್ಯುಸಿಯಾಗಿರುವ ನಟಿ ಹೇಮಾ ಚೌಧರಿ ತಮ್ಮ ಮುಖದ ಮೇಲೆ ಸದಾ ಪ್ರಸನ್ನ‌ ನಗೆ ತುಂಬಿಕೊಂಡಿರುತ್ತಾರೆ. ಆದ್ರೆ ಆ ನಗುವಿನ ಹಿಂದೆ ಈ ನೋವು ಇದ್ದೇ ಇದೆ.

Edited By : Nirmala Aralikatti
PublicNext

PublicNext

29/10/2020 11:12 am

Cinque Terre

57.3 K

Cinque Terre

5