ತನ್ನ ವಿಶಿಷ್ಠ ಅಭಿನಯ ಹಾಗೂ ಕಂಚಿನ ಕಂಠದ ಮೂಲಕವೇ ಕನ್ನಡದ ಬೆಳ್ಳಿತೆರೆ ಮೇಲೆ ರಾರಾಜಿಸುತ್ತಿರುವ ವಸಿಷ್ಠ ಸಿಂಹ ಇದೇ ಮೊದಲ ಬಾರಿಗೆ ತೆಲುಗು ಸಿನಿಮಾವೂಂದರಲ್ಲಿ 'ನಾಯಕ ನಟನಾಗಿ' ಅಭಿನಯಕ್ಕೆ ಸಜ್ಜಾಗಿದ್ದಾರೆ.
ಒಡೆಲಾ ರೈಲ್ವೆ ಸ್ಟೇಷನ್ ಎಂಬ ಟಾಲಿವುಡ್ ಸಿನಿಮಾಕ್ಕೆ ಒಪ್ಪಿಗೆ ಸೂಚಿಸಿರುವ ವಸಿಷ್ಠ ಸಿಂಹ ಅದಕ್ಕಾಗಿ ತಯಾರಿ ಕೂಡ ಆರಂಭಿಸಿದ್ದಾರೆ. ಈ ಸಿನಿಮಾದಲ್ಲಿ ಅಧ್ಯಕ್ಷ ಸಿನಿಮಾ ಖ್ಯಾತಿಯ ಹೆಬಾ ಪಟೇಲ್, ಪೂಜಿತಾ ಪೊನ್ನಡ ನಾಯಕಿಯರಾಗಿ ಅಭಿನಯಿಸಲು ತಯಾರಾಗಿದ್ದು ಒಡೆಲಾ ಎಂಬ ಊರಿನಲ್ಲಿ ನಡೆದ ಒಂದು ನೈಜ ಘಟನೆಗಳನ್ನ ಇಟ್ಟುಕೊಂಡು ಈ ಸಿನಿಮಾ ತಯಾರಿ ಆರಂಭವಾಗಿದೆ. ಇದೊಂದು ಡಿಪರೇಂಟ್ ಕ್ರೈಮ್ ಥ್ರಿಲ್ಲರ್ ಚಿತ್ರವಾಗಿದ್ದು ಅಶೋಕ್ ತೇಜ್ ಎಂಬವರು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಈಗಾಗಲೇ ಚಿತ್ರದ ಮಹೂರ್ತ ಮುಗಿದಿದ್ದು, ಬಿಡುಗಡೆಯಾಗಿರುವ ಚಿತ್ರದ ಟೈಟಲ್ ಪೋಸ್ಟರ್ ಸಾಕಷ್ಟು ಕುತೂಹಲ ಮೂಡಿಸಿದೆ. ವಸಿಷ್ಠ ಸಿಂಹ ಚಂದನವದಷ್ಟೇ ಖದರ್ ಟಾಲಿವುಡ್‌ನಲ್ಲಿ ಸೃಷ್ಟಿಸುತ್ತಾರಾ ಎಂಬುದು ಅಷ್ಟೇ ಉತ್ಸಾಹಕ್ಕೆ ಕಾರಣವಾಗಿದೆ.
ಇನ್ನೊಂದು ವಿಚಾರ ಅಂದ್ರೇ ಟಾಲಿವುಡ್ ಖ್ಯಾತ ನಿರ್ದೇಶಕ ಸಂಪತ್ ನಂದಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದು, ಈ ಸಿನಿಮಾಗೆ ಕೆ ಕೆ ರಾಧಾಮೋಹನ್ ಬಂಡವಾಳ ಹೂಡಿದ್ದಾರೆ. ಈಗಾಗಲೇ ವಸಿಷ್ಠ ಕನ್ನಡದಲ್ಲಿ ನಾಯಕ, ವಿಲನ್, ಸಂಗೀತಗಾರನಾಗಿಯೂ ಕಮಾಲ್ ಮಾಡಿದ್ದು ಕಾಲಚಕ್ರ, ಗೋಧ್ರಾ, ಐರಾ ಚಿತ್ರ ಸೇರಿದಂತೆ ಕನ್ನಡದ ಮೇರುನಟರ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
PublicNext
17/10/2020 01:09 pm