ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತಿಯ ಧರ್ಮವನ್ನ ಗೌರವಿಸ್ತೀನಿ ಅಂದ್ರೆ ಮತಾಂತರವಾದಂತಲ್ಲ: ಶಾರುಖ್ ಖಾನ್ ಪತ್ನಿ ಗೌರಿ

ಮುಂಬೈ: ಬಾಲಿವುಡ್‌ ಖ್ಯಾತ ನಟ ಶಾರುಖ್ ಖಾನ್‌ ಅವರದ್ದು ಅಂತರ್‌ಧಮೀಯ ವಿವಾಹ ಅನ್ನೋದು ಹಳೆಯ ವಿಚಾರ. ಆದರೆ ಈ ಜೋಡಿ ಅನ್ಯೋನ್ಯತೆಯಿಂದ ಬಾಳ್ವೆ ಮಾಡುತ್ತಿದೆ. ಶಾರುಖ್ ಧರ್ಮದ ಬಗ್ಗೆ ಅವರ ಪತ್ನಿ ಗೌರಿ ಸಂದರ್ಶನದಲ್ಲಿ ಮಹತ್ವದ ವಿಚಾರ ಹೇಳಿದ್ದರು.

ಮುಸ್ಲಿಂ ಕುಟುಂಬಕ್ಕೆ ಸೊಸೆಯಾಗಿ ಹೋಗಿರುವುದಕ್ಕೆ ಗೌರಿಗೆ ಪದೇ ಪದೇ ಪ್ರಶ್ನೆಗಳು ಎದುರಾಗುತ್ತವಂತೆ. ಇದನ್ನು ಪುನಃ ಪುನಃ ಕೇಳಿ ನಿಜಕ್ಕೂ ಗೌರಿ ಬೇಸರವಾಗಿದ್ದಾರೆ.

'ಕಾಫಿ ವಿಥ್ ಕರಣ್' ಶೋನಲ್ಲಿ ಮಾತನಾಡಿದ ಗೌರಿ, 'ನಮ್ಮಲ್ಲಿ ಸಮತೋಲನವಿದೆ. ನಾನು ಶಾರುಖ್ ಧರ್ಮವನ್ನು ಗೌರವಿಸುತ್ತೇನೆ ಎಂದಮಾತ್ರಕ್ಕೆ ಮತಾಂತರ ಆಗುತ್ತೇನೆ ಎಂದರ್ಥವಲ್ಲ. ನನಗೆ ಇದರಲ್ಲಿ ನಂಬಿಕೆ ಇಲ್ಲ. ಪ್ರತಿಯೊಬ್ಬರೂ ವೈಯಕ್ತಿಕವಾಗಿ ಅವರ ಧರ್ಮವನ್ನು ಪಾಲಿಸಬೇಕು. ಆದರೆ ಅಲ್ಲಿ ಅಗೌರವ ಇರಲೇಬಾರದು. ಹಾಗೆಯೇ ಶಾರುಖ್ ಕೂಡ ನನ್ನ ಧರ್ಮವನ್ನು ಎಂದೂ ಅಗೌರವಿಸಿಲ್ಲ' ಎಂದು ಹೇಳಿದ್ದಾರೆ.

Edited By : Vijay Kumar
PublicNext

PublicNext

16/10/2020 11:15 pm

Cinque Terre

48.18 K

Cinque Terre

7