ಬೆಂಗಳೂರು: ನಟ ದಿವಂಗತ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ದಿನವೇ ಜೂನಿಯರ್ ಚಿರು ಜನಿಸಲಿದ್ದಾನೆ ಎಂಬ ಸುಳಿವನ್ನು ನಟ ಧ್ರುವ ಸರ್ಜಾ ನೀಡಿದ್ದಾರೆ. ಜೂನಿಯರ್ ಚಿರು ಆಗಮನಕ್ಕೆ ಕಾದಿರುವ ಸರ್ಜಾ ಫ್ಯಾಮಿಲಿ, ಚಿರು ಮಗುವಿನ ವೆಲ್ಕಮ್ಗೆ ಸ್ಪೆಷಲ್ ವಿಡಿಯೋ ಮಾಡಿದೆ.
ಅ.17ರಂದು ಸ್ಯಾಂಡಲ್ವುಡ್ ನಟ ದಿ. ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಸಹೋದರ ಧ್ರುವ ಸರ್ಜಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಚಿರು ಮಗುವಿನ ವೆಲ್ಕಮ್ಗೆ ಸ್ಪೆಷಲ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಸರ್ಜಾ ಕುಟುಂಬದ ವಿವಿಧ ಹಿರಿಯರು ಹಾಗೂ ಗಣ್ಯರನ್ನು ಸಹ ತೋರಿಸಲಾಗಿದ್ದು, ಹ್ಯಾಪಿ ವೆಲ್ ಕಮ್ ಚಿರು ಎಂದು ಅರ್ಜುನ್ ಸರ್ಜಾ ಹೇಳುತ್ತಿರುವುದನ್ನು ಗಮನಿಸಬಹುದಾಗಿದೆ.
ವಿಡಿಯೋ ಜೊತೆಗೆ ಧ್ರುವ ಸರ್ಜಾ ಅವರು, 'ಹ್ಯಾಪಿ ಬರ್ತ್ ಡೇ ಚಿರು.. ಮೈ ಲವ್ ಫಾರೆವರ್, ಜೂನಿಯರ್ ಚಿರು ಕಮಿಂಗ್ಸೂನ್' ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ತೋಳುಗಳ ಎಮೋಜಿ ಹಾಕಿ, ಈ ಪೋಸ್ಟ್ ನ್ನು ಸರ್ಜಾ ಕುಟುಂಬದ ಬಹುತೇಕರಿಗೆ ಟ್ಯಾಗ್ ಮಾಡಿ ಕೊನೆಗೆ ಜೈ ಹನುಮಾನ್ ಎಂದಿದ್ದಾರೆ. ಇದು ಚಿರು ಹುಟ್ಟು ಹಬ್ಬದ ದಿನವೇ ಜೂ. ಚಿರು ಜನನ ಆಗಲಿದೆಯಾ? ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿಸಿದೆ.
PublicNext
16/10/2020 03:16 pm