ತೂಕ ಹೆಚ್ಚಿಸ್ಕೊಂಡಿದ್ದ ನಟಿಗೆ ತೂಕ ಇಳಿಸೋ ಕಷ್ಟ, ತೂಕ ಹೆಚ್ಚಿಸೋದು ಫನ್, ಇಳಿಸೋದು ಪನಿಷ್ ಮೆಂಟ್ ಎಂದ ಕಂಗನಾ ಇಲ್ನೋಡಿ ಫೊಟೋಸ್ ಇಲ್ಲಿವೆ ನೋಡಿ.
ತಲೈವಿ ಸಿನಿಮಾ ಮಾಡಿದ ಬಾಲಿವುಡ್ ನಟ ಕಂಗನಾ ರಣಾವತ್ ಸಿನಿಮಾಗಾಗಿ 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು.
ಇದೀಗ ಸಿನಿಮಾ ಶೂಟಿಂಗ್ ಬಹುತೇಕ ಮುಕ್ತಾಯವಾಗಿದ್ದು ನಟಿಗೆ ತೂಕ ಇಳಿಸಿಕೊಳ್ಳೋ ಸವಾಲು ಎದುರಾಗಿದೆ. ಮತ್ತೆ ಕಠಿಣ ವರ್ಕೌಟ್ ನಲ್ಲಿ ಕಂಗನಾ ಬ್ಯುಜಿಯಾಗಿದ್ದಾರೆ.
ಸದ್ಯ ನಟಿ ತೂಕ ಇಳಿಸಿಕೊಳ್ಳೋ ಕಸರತ್ತಿನಲ್ಲಿರುವ ವರ್ಕೌಟ್ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.
ತಲೈವಿಗಾಗಿ ತೂಕ ಹೆಚ್ಚಸ್ಕೊಂಡಿದ್ದೆ. ಈಗ ಶೂಟಿಂಗ್ ಬಹುತೇಕ ಮುಗಿಯುತ್ತಾ ಬಂದಿದೆ.
ಮತ್ತೆ ಮೊದಲಿನಂತಾಗಬೇಕು. ಬೇಗ ಎದ್ದು ಜಾಗ್ ಮಾಡ್ತಿದ್ದೀನಿ ಯಾರೆಲ್ಲಾ ನಂಜೊತೆ ಜಾಯಿನ್ ಆಗ್ತೀರಾ ಎಂದು ಕಂಗನಾ ಕೇಳಿದ್ದಾರೆ.
ಬೇಕಾಬಿಟ್ಟಿ ಖಾದ್ಯಗಳನ್ನಿಟ್ಟು ತಿನ್ನುವ ಫೋಟೋ ಹಾಕಿದ ನಟಿ ತೂಕ ಹೆಚ್ಚಿಸ್ಕೊಳ್ಳೋದು ಫನ್, ಇಳಿಸ್ಕೊಳೋದು ಪನಿಷ್ಮೆಂಟ್ ಎಂದಿದ್ದಾರೆ.
PublicNext
15/10/2020 12:13 pm