ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿರು ಜನ್ಮದಿನಕ್ಕೆ ವಿಶೇಷ ಉಡುಗೂರೆಗೆ ಸಜ್ಜಾಗಿವೆ ಸಿನಿಮಾ ತಂಡ

ಕೊರೊನಾ ಮಹಾಮಾರಿ ಒಂದಷ್ಟೇ ಅಲ್ಲಾ ಈ 2020ರ ವರ್ಷಾಂತ್ಯದಲ್ಲಿ ಅನೇಕ ಕನ್ನಡ ನಟರು ಆಕಾಲಿಕ ಮರಣಕ್ಕೆ ತುತ್ತಾಗಿ ಸದ್ಯ ಚಂದನವನದ ದು:ಖದಲ್ಲಿದೆ. ಅದರಲ್ಲಿ ಸರ್ಜಾ ಕುಟುಂಬದ ಕುಡಿ ಚಿರಂಜೀವಿ ಸರ್ಜಾ ನಿಧನದ ನೋವು ಅಭಿಮಾನಿಗಳನ್ನು ಕಾಡಿದ್ದು ಅಷ್ಟೀಷ್ಟಲ್ಲ.

ಚಿರು ಬದುಕಿದ್ದರೆ ಇದೇ ಅಕ್ಟೋಬರ್ 17ಕ್ಕೆ 36ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು. ಸದ್ಯ ಅವರಿಲ್ಲದಿರುವ ಈ ದಿನದಲ್ಲಿ ಚಿರು ಸಿನಿಮಾಗಳು ಮತ್ತೆ ಅಭಿಮಾನಿಗಳನ್ನ ತಲಪುಲು ಸಜ್ಜಾಗಿದ್ದು, ಚಿರು ಜನ್ಮದಿನಕ್ಕೆ ಅವರ ನಟನೆಯ ಸಿನಿಮಾ ತಂಡಗಳು ಹೊಸ ಉಡುಗೊರೆಗೆ ನೀಡುತ್ತಿವೆ.

ಈ ವಿಚಾರವಾಗಿ ಚಿರು ನಟನೆಯ ಕ್ಷತ್ರೀಯ ಚಿತ್ರತಂಡ ಅಕ್ಟೋಬರ್ 17ಕ್ಕೆ ಚಿತ್ರದ ಟೀಸರ್ ಬಿಡುಗಡೆಯ ಮೂಲಕ ಜನ್ಮದಿನದ ಶುಭಾಶಯ ಹೇಳಲಿದ್ದರೆ, ಇತ್ತ ಅಕ್ಟೋಬರ್ 16ರಂದು ಕೊರೊನಾ ಬಳಿಕ ಶಿವಾರ್ಜನ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಅರ್ಧ ಚಿತ್ರಿಕರಣ ಮುಗಿಸಿರುವ ಕ್ಷತ್ರಿಯ ಸಿನಿಮಾ ಪೂರ್ಣ ಪ್ರಮಾಣದ ಚಿತ್ರೀಕರಣ ಮುಗಿಸಲಿದ್ದು, ಈ ಸಿನಿಮಾದಲ್ಲಿ ಚಿರಂಜೀವಿ ನಟನೆಗೆ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ.

ಧ್ರುವ ಸರ್ಜಾ ನಂದಕಿಶೋರ್ ನಿರ್ದೇಶನದ ಉದಮ್ ಮೆಹ್ತಾ ನಿರ್ಮಾಣದ ಹೊಸ ಚಿತ್ರ ದಸರಾಗೆ ಮುಹೂರ್ತ ನಿಗದಿಯಾಗಿದ್ದು, ಶೀಘ್ರವೇ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಧ್ರುವ ಸರ್ಜಾ ಅಣ್ಣನ ಸಿನಿಮಾದ ಡಬ್ಬಿಂಗ್ ತನ್ನ ಹೊಸ ಸಿನಿಮಾದ ಚಿತ್ರೀಕರಣ ಎರಡು ಜವಾಬ್ದಾರಿ ಹೊಣೆ ಹೊತ್ತಿದ್ದು, ಪ್ರೇಕ್ಷಕ ಚಿರಂಜೀವಿ ಸರ್ಜಾರವರ ಚಿತ್ರಕ್ಕೆ ಬಿಡುಗಡೆ ನಂತರ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದು ಚಂದನವನದ ನಿರ್ಮಾಪಕ, ನಿರ್ದೇಶಕರ ಉತ್ಸಾಹ ಹೆಚ್ಚಿಸಿದೆ.

Edited By : Vijay Kumar
PublicNext

PublicNext

13/10/2020 01:42 pm

Cinque Terre

39.33 K

Cinque Terre

2