ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಚಂಡ ಪುಟಾಣಿಗಳು ಡಬ್ಬಿಂಗ್ ಕಾರ್ಯ ಆರಂಭ

ಡಿ ಅಂಡ್ ಡಿ ಫಿಲಂ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಪದ್ಮಾವತಿಯವರು ನಿರ್ಮಿಸುತ್ತಿರುವ ಪ್ರಚಂಡ ಪುಟಾಣಿಗಳು ಮಕ್ಕಳ ಚಲನಚಿತ್ರದ ಚಿತ್ರೀಕರಣ ಮುಕ್ತಾಯಗೊಂಡು ಇದೀಗ ಡಬ್ಬಿಂಗ್ ಕಾರ್ಯ ಆರಂಭಗೊಂಡಿದೆ.

ಕೋಲಾರದ ನರಸಾಪುರದ ಗುಡ್ಡಗಾಡು ಪ್ರದೇಶದಲ್ಲಿ ಮಕ್ಕಳನ್ನು ನಿಧಿಗಾಗಿ ಬಲಿಕೊಡುವಾಗ ಅಲ್ಲಿಗೆ ಬರುವ ಹಿರಿಯ ನಟ ಶಶಿಕುಮಾರ ಅವರು ಅಮಾಯಕರನ್ನು ಕಾಪಾಡಲು ಯುಗಯುಗದಲ್ಲೂ ನಾನು ಅವತಾರವೆತ್ತುತ್ತಲೇ ಬಂದಿದ್ದೇನೆ. ಇನ್ನು ಅವತಾರಗಳಿಲ್ಲ ಸಂಹಾರವೇ ಎನ್ನುತ್ತ ಖಳನಟರಾದ ಬಲರಾಮ್ ಪಂಚಾಲ್, ಕೋಲಾರಬಾಲು, ನಿಡವಳ್ಳಿ ರೇವರ್ಣಣ, ಗುರು ಪ್ರಸನ್ನ ಮೊದಲಾದವರನ್ನು ಸೆದೆಬಡೆಯುವ ಸಾಹಸ ದೃಶ್ಯಗಳೊಂದಿಗೆ ಚಿತ್ರದ ಚಿತ್ರೀಕರಣ ಮುಕ್ತಾಯ ಗೊಳಿಸಲಾಯಿತು.

Edited By : Nagesh Gaonkar
PublicNext

PublicNext

10/10/2020 06:05 pm

Cinque Terre

56.63 K

Cinque Terre

0