ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡ್ರಗ್ಸ್‌ ಕೇಸ್‌: ಶೀಘ್ರವೇ ಸ್ಯಾಂಡಲ್‌ವುಡ್ ಸ್ಟಾರ್ ನಟನಿಗೆ ಎನ್‍ಸಿಬಿ ಬಿಗ್ ಶಾಕ್

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ದಂಧೆ ಪ್ರಕರಣದ ಸಂಬಂಧ ಶೀಘ್ರವೇ ಸ್ಟಾರ್ ನಟನಿಗೆ ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್‍ಸಿಬಿ) ಬಿಗ್‌ ಶಾಕ್ ನೀಡಲಿದೆ.

ಕಾರ್ಪೊರೇಟರ್ ಮಗ ಯಶಸ್ ‘ಸ್ಟಾರ್ ನಟ’ನ ಹೆಸರು ಹೇಳಿದ್ದಾನೆ. ಆತನ ಹೇಳಿಕೆ ಆಧರಿಸಿ ಎನ್‍ಸಿಬಿ ದೊಡ್ಡ ನಟನ ಬೆನ್ನುಬಿದ್ದಿದೆ. ಸ್ಟಾರ್ ನಟ ಆಗಿರುವುದರಿಂದ ಪ್ರಬಲ ಸಾಕ್ಷ್ಯಕ್ಕೆ ಎನ್‍ಸಿಬಿ ಶೋಧ ನಡೆಸುತ್ತಿದೆ. ಸದ್ಯದಲ್ಲೇ ಆ ನಟನಿಗೂ ಅಧಿಕಾರಿಗಳು ಬಿಸಿ ಮುಟ್ಟಿಸಲಿದ್ದಾರೆ ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ ಹಾಗೂ ಇವರ ಆಪ್ತರು ಪರಪ್ಪನ ಅಗ್ರಹಾರ ಸೇರಿದ್ದಾರೆ. ಇಬ್ಬರೂ ನಟಿಯರ ನ್ಯಾಯಾಂಗ ಬಂಧನ ಅವಧಿಯನ್ನು ಅಕ್ಟೋಬರ್ 23ರವರೆಗೆ ವಿಸ್ತರಿಸಿ ಡಿಪಿಎಸ್ ವಿಶೇಷ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.

Edited By : Vijay Kumar
PublicNext

PublicNext

10/10/2020 12:01 pm

Cinque Terre

79.25 K

Cinque Terre

2