ಲಾಸ್ ಎಂಜಲೀಸ್: ನನ್ನ ಮುಖ ಟೊಮೆಟೊ ರೀತಿ ಕೆಂಪಾಯ್ತು ಎಂದು ಮಾದಕ ನಟಿ ಸನ್ನಿ ಲಿಯೋನ್ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸನ್ನಿ ಲಿಯೋನ್ ಸದ್ಯ ಯೋಗ ಹಾಗೂ ಬಾಕ್ಸಿಂಗ್ ಅಭ್ಯಾಸದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ಸಂಬಂಧ ಅವರು ತಮ್ಮ ಇನ್‌ಸ್ಟಾಗ್ರಾಮ್ ಮೂಲಕ ಕೆಲ ಫೋಟೋ ಹಾಗೂ ವಿಡಿಯೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಬಾಕ್ಸಿಂಗ್ ಸೆಷನ್‌ನ ಎರಡನೇ ದಿನದ ಅನುಭವವನ್ನು ಹಂಚಿಕೊಂಡಿರುವ ಸನ್ನಿ, 'ಹೇ ಗಾಯ್ಸ್, ಎರಡನೇ ದಿನದ ಬಾಕ್ಸಿಂಗ್ ಮುಗಿಯಿತು. ಬಾಕ್ಸಿಂಗ್‌ನಿಂದ ಮುಖ ಹೇಗೆ ಕೆಂಪಾಗಿದೆ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಅಂದ್ರೆ ಬುಧವಾರ ಫೋಟೋವನ್ನು ಹಂಚಿಕೊಂಡಿದ್ದ ಸನ್ನಿ, 'ಮೊದಲ ದಿನದ ಬಾಕ್ಸಿಂಗ್! ಮೊದಲು ಮುಖ ಹೀಗಿತ್ತು, ಆಮೇಲೆ ಟೊಮೆಟೊ ರೀತಿ ಕೆಂಪಾಯಿತು. ಆದರೂ ಅಭ್ಯಾಸವನ್ನು ಮುಂದುವರಿಸುತ್ತೇನೆ' ಎಂದು ಹೇಳಿದ್ದರು.
PublicNext
08/10/2020 02:44 pm