ಶೀತಲ್ ಶೆಟ್ಟಿ ನಿರ್ದೇಶನದ 'ವಿಂಡೋ ಸೀಟ್' ಈಗಾಗಲೇ ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷಿತ ಚಿತ್ರವಾಗಿ ಬಿಂಬಿತವಾಗಿದೆ. ಶೀತಲ್ ಶೆಟ್ಟಿ ನಿರ್ದೇಶನದ ನಿರೂಪ್ ಭಂಡಾರಿ ಅಭಿನಯದ 'ವಿಂಡೋ ಸೀಟ್' ಚಿತ್ರದ ಫಸ್ಟ್ ಲುಕ್ ಅನ್ನು ಸೆಪ್ಟೆಂಬರ್ 24 ರಂದು ಬೆಳಿಗ್ಗೆ 11ಗಂಟೆಗೆ ರಿಲೀಸ್ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಶೀತಲ್ ಶೆಟ್ಟಿ ಹಂಚಿಕೊಂಡಿದ್ದಾರೆ.
ಈಗಾಗಲೇ ಶೀತಲ್ ನಟಿಯಾಗಿ ಸೈ ಅನ್ನಿಸಿಕೊಂಡಿದ್ದಾರೆ, ನಾಯಕಿಯಾಗಿಯೂ ಮಿಂಚಿದ್ದಾರೆ. ಶೀತಲ್ ಶೆಟ್ಟಿ ನಿರ್ದೇಶನದ ಮೊದಲ ಚಿತ್ರವಾಗಿದ್ದು ಸದ್ಯ ಎಲ್ಲರ ಚಿತ್ತ ಫಸ್ಟ್ ಲುಕ್ಕಿನತ್ತ ನೆಟ್ಟುಕೊಂಡಿದೆ.
ಅಂತೂ ಶೀತಲ್ ಶೆಟ್ಟಿ ಮೊದಲ ಹೆಜ್ಜೆಯಲ್ಲಿಯೇ ಭಾರೀ ಗೆಲುವು ತಮ್ಮದಾಗಿಸಿಕೊಳ್ಳೋ ಲಕ್ಷಣಗಳು ಕಾಣುತ್ತಿವೆ, ಸಿನಿಮಾ ಈಗಾಗಲೇ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಹೆಚ್ಚಿಸಿದೆ.
PublicNext
24/09/2020 06:32 pm