", "articleSection": "Sports,Government,News", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/399529_1736587708_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "AnandChitradurga" }, "editor": { "@type": "Person", "name": "9742704237" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿತ್ರದುರ್ಗ: ಚಿತ್ರದುರ್ಗದ ಪೊಲೀಸ್ ಕವಾಯತು ಮೈದಾನದಲ್ಲಿ ಅಫೀಶಿಯಲ್ ಪೊಲೀಸ್ ಕಪ್ ಕ್ರಿಕೆಟ್ ಟೂರ್ನಮೆಂಟ್ ಅನ್ನ ಸಚಿವ ಡಿ ಸುಧಾಕರ್ ಉದ್ಘಾಟನೆ...Read more" } ", "keywords": "Node,Chitradurga,Sports,Government,News", "url": "https://publicnext.com/article/nid/Chitradurga/Sports/Government/News" }
ಚಿತ್ರದುರ್ಗ: ಚಿತ್ರದುರ್ಗದ ಪೊಲೀಸ್ ಕವಾಯತು ಮೈದಾನದಲ್ಲಿ ಅಫೀಶಿಯಲ್ ಪೊಲೀಸ್ ಕಪ್ ಕ್ರಿಕೆಟ್ ಟೂರ್ನಮೆಂಟ್ ಅನ್ನ ಸಚಿವ ಡಿ ಸುಧಾಕರ್ ಉದ್ಘಾಟನೆ ಮಾಡಿದ್ದಾರೆ.
ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆ ಹಮ್ಮಿಕೊಂಡಿದ್ದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರು ಆಗಮಿಸಿ ಟಾಸ್ ಮಾಡಿ ಕ್ರೀಡಾಪಟುಗಳಿಗೆ ಕೈ ಕುಲುಕಿ ಶುಭ ಕೋರುವ ಮೂಲಕ ಕ್ರಿಕೆಟ್ ಟೂರ್ನಮೆಂಟ್ ಗೆ ಚಾಲನೆ ನೀಡಿದ್ದಾರೆ.
ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ನಗರಸಭೆ, ಅಬಕಾರಿ ಇಲಾಖೆ, ಸೇರಿದಂತೆ ಒಟ್ಟು 16 ತಂಡಗಳು ಈ ಒಂದು ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಭಾಗವಹಿಸಲ್ಲಿವೆ.
ಈ ಸಂದರ್ಭದಲ್ಲಿ ಸಚಿವ ಡಿ. ಸುಧಾಕರ್ ಅವರು ಮಾತನಾಡಿ ಸರ್ಕಾರಿ ನೌಕರರೆಲ್ಲ ಸೇರಿ ಕ್ರೀಡೆ ಆಯೋಜನೆ ಮಾಡಿದ್ದು ಇದೊಂದು ವಿಶೇಷ ಕಾರ್ಯಕ್ರಮವಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಉಲ್ಲಾಸ ಹಾಗೂ ಒಳ್ಳೆಯ ಚೈತನ್ಯ ಬರುತ್ತದೆ. ಕ್ರೀಡೆ ಜೀವನದಲ್ಲಿ ಪ್ರಮುಖ ಅಂಗವಾಗಿದೆ. ಕೆಲಸದ ಕಡೆ ಹೆಚ್ಚು ಆಸಕ್ತಿ ವಹಿಸಲು ಕ್ರೀಡೆ ಸಹಕಾರಿ ಆಗಲಿದ್ದು ಕ್ರೀಡೆ ಇದ್ದಲ್ಲಿ ಯಶಸ್ಸು ಸಹ ಇರುತ್ತದೆ ಎಂದು ತಿಳಿಸಿದರು.
Kshetra Samachara
11/01/2025 02:58 pm