ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ದಸರಾ ಹಬ್ಬದ ಸಾಂಪ್ರದಾಯಿಕ ಆಚರಣೆ ಸಂಭ್ರಮ

ಚಿತ್ರದುರ್ಗ: ಒಂಬತ್ತು ದಿನಗಳ ದಸರಾ ಹಬ್ಬವನ್ನು ನಗರದಲ್ಲಿ ಸಡಗರ ಸಂಭ್ರಮದಿಂದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಆಚರಿಸಲಾಯಿತು. ವಿಜಯದಶಮಿ ದಿನ ಬುಧವಾರ ಸಂಜೆ ಬನ್ನಿ ಮುಡಿಯುವ ಮೂಲಕ ಭಕ್ತರು ಬಳ್ಳಾರಿ ರಸ್ತೆಯ ಬನ್ನಿಮಂಟಪದ ಮೈದಾನದಲ್ಲಿ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ದಸರಾ ಹಬ್ಬದ ಹಿನ್ನೆಲೆಯಲ್ಲಿ ಶ್ರೀ ವೀರಭದ್ರಸ್ವಾಮಿ, ಗ್ರಾಮದೇವತೆ ಚಳ್ಳಕೆರೆಮ್ಮ, ಹುಡಸಲಮ್ಮ, ಬನಶಂಕರಿ,ಸಿದ್ದೇಶ್ವರಸ್ವಾಮಿ, ಬನ್ನಿಮಹಕಾಳಿ ದೇವಸ್ಥಾನದಲ್ಲಿ ಒಂಬತ್ತು ದಿನಗಳ ದಿನಕ್ಕೊಂದು ಅಲಂಕಾರ ಮಾಡುವ ಮೂಲಕ ವಿಶೇಷ ಪೂಜೆ ನೆರೆವೇರಿಲಾಗಿತ್ತು ಬನ್ನಿ ಮುಡಿಯುವ ಮೂಲಕ ಇಂದು ದಸರಾ ಹಬ್ಬಕ್ಕೆ ತೆರೆಬಿದ್ದಿದೆ.

ಶ್ರೀ ವೀರಭದ್ರಸ್ವಾಮಿ,ಚಳ್ಳಕೆರೆಮ್ಮ, ಹುಡುಸಲಮ್ಮ, ಸಿದ್ದೇಶ್ವರ ಸ್ವಾಮಿ ದೇವರುಗಳನ್ನು ದೇವಸ್ಥಾನಗಳಿಂದ ನಂದಿಕೋಲು, ವಿವಿಧ ವಾಧ್ಯಗಳೊಂದಿಗೆ ಬನ್ನಿಮಂಟಕ್ಕೆ ತೆರಳಿ ಬನ್ನಿಕಟ್ಟೆ ಮೇಲೆ ದೇವರುಗಳನ್ನು ಪ್ರತಿಷ್ಟಾಪನೆ ನೆರೆವೇರಿಸಿ ವಿಶೇಷ ಪೂಜೆಸಲ್ಲಿಸಿ ಎಡೆಹಾಕಿ ನಂತರ ಪುರಂತರಪ್ಪ ಬಾಳೆ ಗಿಡಕ್ಕೆ ಬಿಲ್ಲು ಹೊಡೆಯುವ ಮೂಲಕ ಚಾಲನೆ ನೀಡಿದರು.

ಇನ್ನೂ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ನಂತರ ಭಕ್ತರು ಬನ್ನಿಯನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.

ಬನ್ನಿ ಮುಡಿದ ನಂತರ ಶಾಸಕ ಟಿ.ರಘುಮೂರ್ತಿ ಮಾತನಾಡಿ ದೈನಂದಿನ ಬದುಕಿನ ಜಂಜಾಟದಲ್ಲಿ ಮುಕ್ತಿ ಹೊಂದಿ ದೇಹಕ್ಕೆ ಮನಸ್ಸಿಗೆ, ಹೊಸ ಚೇತನನೀಡುವಲ್ಲಿ ಹಬ್ಬಗಳು, ದೇವರ ಉತ್ಸಹಗಳು ಮಹತ್ವದ ಪಾತ್ರವಹಿಸುತ್ತವೆ. ಜಗತ್ತಿನಲ್ಲಿ ಉಂಟಾಗುವ ಅಭಿಪ್ರಾಯ ಬೇದಗಳನ್ನು, ಸಂಬಂಧಗಳ ತೊಡಕುಗಳನ್ನು ಮತ್ತು ತಪ್ಪು ಗ್ರಹಿಕೆಗಳಿಂದ ಉಂಟಾಗುವ ಸಾಂಸಾರಿಕ ಬಿರುಕುಗಳನ್ನು ಸರಿಪಡಿಸಿಕೊಳ್ಳಲು ಹಬ್ಬಗಳು ನೆರವಾಗುತ್ತವೆ. ಪ್ರೀತಿ ವ್ಯಕ್ತಪಡಿಸುವ ವಿಜಯ ದಶಮಿ ಹಬ್ಬ ಮಾನವೀಯ ಅನುಕಂಪಕ್ಕೆ ಸಹಕಾರಿಯಾಗಲಿದೆ ಎಂದರು. ಈ ವೇಳೆ ಚಳ್ಳಕೆರೆ

ತಹಶೀಲ್ದಾರ್ ಎನ್.ರಘುಮೂರ್ತಿ, ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳ ಹಾಗೂ ಸದಸ್ಯರು ದೇವಸ್ಥಾನ ಕಮಿಟಿಯವರು ಇತರರು ಶಾಸಕರಿಗೆ ಸಾಥ್ ನೀಡಿದರು.

Edited By :
PublicNext

PublicNext

05/10/2022 08:37 pm

Cinque Terre

32.7 K

Cinque Terre

0

ಸಂಬಂಧಿತ ಸುದ್ದಿ