ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಕಾಂಗ್ರೆಸ್ ನಾಯಕರ ವಿರುದ್ಧ ಫೋಟೋ ಅಂಟಿಸಿದ ಬಿಜೆಪಿ

ತುಮಕೂರು: ಕಾಂಗ್ರೆಸ್ ವಿರುದ್ಧ ಬಿಜೆಪಿಯ ಪೋಸ್ಟರ್ ಅಭಿಯಾನ ತೀವ್ರಗೊಂಡಿದೆ. ಚಿಕ್ಕನಾಯಕನಹಳ್ಳಿಗೆ ರಾಹುಲ್ ಪಾದಯಾತ್ರೆ ಬಂದಾಗಲೇ, ಫೋಸ್ಟರ್ ಬಿಸಿ ತಟ್ಟಿದೆ. ಎಸ್‌ಡಿಪಿಐ, ಪಿಎಫ್ಐ ಸಂಘಟನೆ ಫೋಷಣೆ ಮಾಡಿದ್ದು ಸಿದ್ದರಾಮಯ್ಯ ಎಂಬ ಪೋಸ್ಟರ್‌ಅನ್ನು ಚಿಕ್ಕನಾಯಕನಹಳ್ಳಿಯ ಹಲವು ಕಡೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಅಂಟಿಸಿದ್ದಾರೆ.

ಸಿದ್ದರಾಮಯ್ಯನವರೇ, ನಾನು ರಾಜು. ಕಾಂಗ್ರೆಸ್‌ನಿಂದಲೇ ನನ್ನ ಕೊಲೆ ಆಗಿದ್ದು, ಪಿಎಫ್ಐ, ಎಸ್‌ಡಿಪಿಐ ಮೇಲಿನ ನಿಮ್ಮ ಪ್ರೀತಿಯಿಂದ ಪ್ರಕರಣಗಳನ್ನು ಕೈ ಬಿಟ್ಟಿದ್ದಕ್ಕೆ ನಾನು ಕೊಲೆಯಾದೆ. ಈ ಹೆಗ್ಗಳಿಕೆ ನಿಮಗೆ ಸಲ್ಲಲಿ ಎಂಬ ಭಿತ್ತಿ ಪತ್ರ ಅಂಟಿಸಿ ಅಭಿಯಾನ ಮಾಡಲಾಗಿದೆ. ಈ ರೀತಿ ಅಭಿಯಾನದಿಂದ ರಾಹುಲ್ ಪಾದಯಾತ್ರೆ ವೇಳೆ ಸಿದ್ದರಾಮಯ್ಯಗೆ ಮುಜುಗರ ಉಂಟಾಗಿದೆ.

Edited By : Shivu K
PublicNext

PublicNext

09/10/2022 02:40 pm

Cinque Terre

32.28 K

Cinque Terre

1

ಸಂಬಂಧಿತ ಸುದ್ದಿ