ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿರಿಧಾನ್ಯಗಳ ದೊರೆ ಶಾಸಕ ಬಿ.ಜಿ. ಗೋವಿಂದಪ್ಪಗೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಸನ್ಮಾನ

ಹೊಸದುರ್ಗ : ಸಿರಿಧಾನ್ಯ ಬೆಳೆಗಳನ್ನ ಅತಿ ಹೆಚ್ಚು ಬೆಳೆಯುತ್ತಿರುವ ಕಾರಣ ಪ್ರಸಕ್ತ ವರ್ಷದಲ್ಲಿ ಹೊಸದುರ್ಗ ಪಟ್ಟಣವನ್ನ ಸಿರಿಧಾನ್ಯಗಳ ನಾಡು ಎಂದು ಪುರಸಭೆ ನಾಮಕರಣ ಮಾಡುವ ಮೂಲಕ ತಾಲೂಕಿನ ರೈತರಿಗೆ ಅಭಿನಂದನೆಯನ್ನು ಸಲ್ಲಿಸಿತ್ತು.

ಈ ಎಲ್ಲಾ ಸಾಧನೆಗಳ ಪರಿಣಾಮ ಅಂತರಾಷ್ಟ್ರೀಯ ಸಾವಯುವ ಸಿರಿಧಾನ್ಯ ಮೇಳ ಕಾರ್ಯಕ್ರಮವು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿ ಸಭಾಂಗಣದಲ್ಲಿ ಗುರುವಾರ ಆಯೋಜನೆ ಮಾಡಲಾಯಿತು ಈ ವೇಳೆ ಹೊಸದುರ್ಗ ತಾಲೂಕಿನ ಶಾಸಕ ಹಾಗೂ ಆಹಾರ ನಾಗರಿಕ ಸರಬರಾಜು ನಿಗಮ ಮಂಡಳಿಯ ಅಧ್ಯಕ್ಷ ಬಿ.ಜಿ. ಗೋವಿಂದಪ್ಪನವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ ಸಿ ಎಂ ಡಿ ಕೆ ಶಿವಕುಮಾರ್. ದೇಶದಲ್ಲಿಯೇ ಅತಿ ಹೆಚ್ಚು ಪ್ರಮಾಣದ ಸಿರಿಧಾನ್ಯಗಳನ್ನು ಬೆಳೆದಿರುವ ಹಿನ್ನೆಲೆಯಲ್ಲಿ ತಾಲೂಕಿನ ಪರವಾಗಿ ಶಾಸಕರಿಗೆ ಗೌರವವನ್ನು ಸಲ್ಲಿಸಿದ್ದಾರೆ.

ತಾಲೂಕಿನಲ್ಲಿ ಸಿರಿಧಾನ್ಯ ಬೆಳೆಯುವ ರೈತರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದರ ಪರಿಣಾಮ ಇಂದು ನಮ್ಮ ತಾಲೂಕಿನ ಶಾಸಕರು ದೇಶದಲ್ಲಿಯೇ ಅತಿ ಹೆಚ್ಚು ಸಿರಿಧಾನ್ಯಗಳನ್ನು ಬೆಳೆಯುವ ತಾಲೂಕು ನಮ್ಮದೆಂದು ಗುರುತಿಸಿ ಗೌರವವನ್ನು ಸ್ವೀಕರಿಸುತ್ತಿದ್ದಾರೆ.ಇದು ತಾಲೂಕಿನ ಜನತೆ ಹಾಗೂ ಅಧಿಕಾರಿಯಾಗಿ ನಮ್ಮಗಳಿಗೆ ಅತ್ಯಂತ ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲಿಯೂ ರೈತರು ಹೆಚ್ಚು ಹೆಚ್ಚು ಬೆಳೆಗಳನ್ನ ಬೆಳೆಯುವುದರ ಜೊತೆ ಬಳಸುತ್ತಾ ಮೌಲ್ಯ ವರ್ಧನೆಯತ್ತ ಸಾಗಬೇಕು ಎಂಬುದು ನಮ್ಮ ಆಶಯ.

Edited By : PublicNext Desk
Kshetra Samachara

Kshetra Samachara

23/01/2025 05:48 pm

Cinque Terre

3.76 K

Cinque Terre

0

ಸಂಬಂಧಿತ ಸುದ್ದಿ