ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದಲ್ಲಿ ನಡೆದಿರುವ ತರಳಬಾಳು ಹುಣ್ಣಿಮೆ ಮಹೋತ್ಸವ ಕಾರ್ಯಕ್ರಮದ ನಿಮಿತ್ತವಾಗಿ ಇಂದು ಬೈಕ್ ರ್‍ಯಾಲಿಯನ್ನ ಅದ್ದೂರಿಯಾಗಿ ನೆರವೇರಿಸಿದ್ದಾರೆ.
ಫೆಬ್ರವರಿ ನಾಲ್ಕರಿಂದ 12 ರವರೆಗೆ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಮೊದಲ ದಿನದ ಅಂಗವಾಗಿ ಬೈಕ್ ರ್ಯಾಲಿಯೂ ಸಿರಿಗೆರೆ ಮೂಲಕ ಸಿರಿಗೆರೆ ಸರ್ಕಲ್, ಚಿಕ್ಕಬೆನ್ನೂರು, ಕೊಳಹಾಳ ಮಾರ್ಗವಾಗಿ ಭರಮ್ಸಾಗರವನ್ನು ತಲುಪಿ ರಸ್ತೆ ಉದ್ದಕ್ಕೂ ಬೈಕ್ ಸವಾರರು ತರಳಬಾಳು ಶ್ರೀಗಳಿಗೆ ಜೈಕಾರ ಹಾಕುವುದರ ಮೂಲಕ ಸಂಭ್ರಮಿಸಿದ್ದಾರೆ.
ರಸ್ತೆ ಉದ್ದಕ್ಕೂ ಕೇಸರಿ ಬಾವುಟದಲ್ಲಿ ತರಳಬಾಳು ಜಗದ್ಗುರು ಶ್ರೀಗಳ ಭಾವಚಿತ್ರ ಹಾಗು ಶಿವ ಸೇನೆ ಎಂದು ಬರೆದುಕೊಂಡು ಹರ್ಷದ್ಗಾರ ವ್ಯಕ್ತಪಡಿಸಿದ್ದಾರೆ.
Kshetra Samachara
04/02/2025 07:47 pm