ಚಿತ್ರದುರ್ಗ: ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಸಿಗಲಿ ಅಂತಾ ಗ್ರಾಮ ಪಂಚಾಯತಿ ಮಟ್ಟದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು, ಸ್ಥಳೀಯ ಸಮರ್ಪಕ ನಿರ್ವಹಣೆ ಇಲ್ಲದೇ ಪಾಚಿಕಟ್ಟಿ ನಿಂತಿದೆ.
ಚಿತ್ರದುರ್ಗ ತಾಲೂಕಿನ ದಂಡಿನ ಕುರುಬರಹಟ್ಟಿ ಗ್ರಾಮದಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಶುದ್ಧ ಕುಡಿಯುವ ನೀರಿನ ಘಟಕ ಇದೆ. ಸ್ಥಳೀಯ ಸಮರ್ಪಕ ಆಡಳಿತ ನಿರ್ವಹಣೆ ಇಲ್ಲದೇ ನೀರು ಸಂಗ್ರಹಿಸುವ ಟ್ಯಾಂಕ್ ಪಾಚಿ ಬೆಳೆದು ನಿಂತಿದೆ. ಶುದ್ಧ ಕುಡಿಯುವ ನೀರಿನ ಮೋಟರ್ ತುಕ್ಕು ಹಿಡಿದಿದೆ. ಘಟಕದ ಒಳಗಡೆ ಹೋದ್ರೆ ಮೂಗು ಮುಚ್ಚಿಕೊಂಡು ಹೋಗುವ ವಾತಾವರಣ ಇದೆ. ಈ ಘಟಕದಿಂದ ಸುತ್ತಮುತ್ತು ನಾಲ್ಕು ಹಳ್ಳಿಗಳ ಜನ ನೀರು ಕುಡಿತಾರೆ.
ಇನ್ನು ಸ್ಥಳೀಯ ನಿರ್ವಹಣೆ ಮಾಡುವವರನ್ನು ವಿಚಾರಿಸಿದ್ರೆ ಸಾರ್ವಜನಿಕರಿಗೆ ಉಡಾಫೆ ಉತ್ತರ ಕೊಡ್ತಾರೆ. ಯಾರಿಗಾದ್ರೂ ಅನಾಹುತ ಆದ್ರೆ ಯಾರು ಜಮಾಬ್ದಾರಿ? ಕೂಡಲೇ ಶುದ್ಧ ಕುಡೊಯುವ ನೀರಿನ ಘಟಕ ಸ್ವಚ್ಛತೆ ಮಾಡಿಸಿ ಅಂತಾ ಗ್ರಾಮಸ್ಥರು ಆಗ್ರಹಿಸಿದ್ದಾರೆ.
PublicNext
11/01/2025 01:03 pm