", "articleSection": "Cultural Activity,Public Feed,News", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/271983_1736592445_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MahanteshMolakalmuru" }, "editor": { "@type": "Person", "name": "9380627082" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಮೊಳಕಾಲ್ಮುರು:-ಪ್ರತಿ ಬಾರಿ ಸಂಕ್ರಾಂತಿ ಸಮೀಪಿಸುತ್ತಿದ್ದಂತೆಯೇ ಅಯ್ಯಪ್ಪ ಸ್ವಾಮಿ ಭಕ್ತರ ಸಂಭ್ರಮ ಮುಗಿಲುಮುಟ್ಟುತ್ತದೆ. ಶಬರಿಮಲೆಯ ಅಯ್ಯಪ್ಪ ...Read more" } ", "keywords": "Node,Chitradurga,Cultural-Activity,Public-Feed,News", "url": "https://publicnext.com/article/nid/Chitradurga/Cultural-Activity/Public-Feed/News" }
ಮೊಳಕಾಲ್ಮುರು:-ಪ್ರತಿ ಬಾರಿ ಸಂಕ್ರಾಂತಿ ಸಮೀಪಿಸುತ್ತಿದ್ದಂತೆಯೇ ಅಯ್ಯಪ್ಪ ಸ್ವಾಮಿ ಭಕ್ತರ ಸಂಭ್ರಮ ಮುಗಿಲುಮುಟ್ಟುತ್ತದೆ. ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವರ ಸನ್ನಿಧಿಗೆ ತೆರಳಿ ದೇವರ ಸಾನ್ನಿಧ್ಯದಲ್ಲಿ ಭಕ್ತಿಯ ಪರಾಕಾಷ್ಠೆ ಮೆರೆಯುವ ಗಳಿಗೆಗಾಗಿ ಭಕ್ತರು ಕಾಯುತ್ತಿರುತ್ತಾರೆ.
ಮಾರಮ್ಮನಹಳ್ಳಿ ಗ್ರಾಮದಲ್ಲಿ ಅಯ್ಯಪ್ಪ ಮಾಲಾಧಾರಿಗಳು ಅಯ್ಯಪ್ಪ ಸನ್ನಿಧಾನಕ್ಕೆ ಯಾತ್ರೆ ಕೈಗೊಳ್ಳುವ ಹಿನ್ನೆಲೆಯಲ್ಲಿ ನಾನಾ ಧಾರ್ಮಿಕ ಆಚರಣೆಗಳನ್ನು ಅನುಸರಿಸಿದರು.
ಅಯ್ಯಪ್ಪನ ದೀಕ್ಷೆ ಕೈಗೊಂಡ ಭಕ್ತರ ಕುಟುಂಬ ವರ್ಗದವರೆಲ್ಲರೂ ಒಂದೊಂದು ಬೊಗಸೆ ಅಕ್ಕಿಯನ್ನು ಇರುಮುಡಿ ಚೀಲದಲ್ಲಿ ಹಾಕಿದರು.ಪ್ರಥಮವಾಗಿ ತಾಯಿಗೆ ಅಕ್ಕಿಯನ್ನು ಹಾಕಿದರು ನಂತರ ಅಯ್ಯಪ್ಪ ಮಾಲಾಧಾರಿಗಳ ತಂದೆ, ಹೆಂಡತಿ ಮಕ್ಕಳು, ಬಂಧು ಬಳಗ ಮತ್ತು ಸ್ನೇಹಿತರು ಅಕ್ಕಿ ಹಾಕಿದರು.ಹೀಗೆ ಸಿದ್ಧವಾದ ಇರುಮುಡಿಯ ಗಂಟನ್ನು ಅಯ್ಯಪ್ಪ ಭಕ್ತರು ಅಯ್ಯಪ್ಪನ ಶರಣಾವಳಿಗಳನ್ನು ಹೇಳುತ್ತಾ ಸಾಗಿದರು.ಇರುಮುಡಿಯನ್ನು ಹೊತ್ತ ಸ್ವಾಮಿಗಳನ್ನು ಅಯ್ಯಪ್ಪನ ಪ್ರತಿರೂಪವೆಂದು ತಿಳಿದು ಇವರ ತಂದೆ-ತಾಯಿಯರೂ ಕೂಡ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.ನಂತರ ಅಯ್ಯಪ್ಪನ ಭಜನೆ ಮಾಡುತ್ತಾ ವಾಹನ ಬಳಿ ಬಂದು ವಾಹನಕ್ಕೆ ಪೂಜೆ ಸಲ್ಲಿಸಿ ಪ್ರಯಾಣ ಕೈಗೊಂಡರು.ಈ ವೇಳೆ ಗ್ರಾಮಸ್ಥರು ಸೇರಿದಂತೆ ಸ್ವಾಮಿಗಳ ಸಂಬಂಧಿಕರು ಅಯ್ಯಪ್ಪ ಸ್ವಾಮಿಗಳಿಗೆ ಪ್ರಯಾಣಕ್ಕೆ ಶುಭ ಕೋರುತ್ತಿರುವುದು ಕಂಡು ಬಂದಿತು.
Kshetra Samachara
11/01/2025 04:17 pm