ಮೊಳಕಾಲ್ಮುರು: ಪಟ್ಟಣದ ಕೋಟೆ ಬಡಾವಣೆಯ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ನಾನಾ ಪೂಜೆ ವಿಧಿ ವಿಧಾನಗಳು ನೆರವೇರಿಸಲಾಯಿತು.
ವೈಕುಂಠ ಏಕಾದಶಿ ಪ್ರಯುಕ್ತ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ವೈಭಯುತ ಅಲಂಕಾರದೊಂದಿಗೆ ವಿಶೇಷ ಪೂಜೆಗಳು ಜರುಗಿದವು.ಬೆಳಿಗ್ಗೆಯಿಂದಲೂ ಸಾಗರೋಪಾದಿಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.
ಸುಮಾರು 200 ವರ್ಷಗಳ ಪುರಾತನ ಕಾಲದ ದೇವಸ್ಥಾನವಾಗಿದ್ದು, ಮೈಸೂರು ಮಹಾರಾಜರ ಕಾಲದ್ದು ಎನ್ನುವ ಐತಿಹ್ಯವಿದೆ. ದೇವಸ್ಥಾನದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ನಾನಾ ಅಭಿಷೇಕ ನೆರವೇರಿಸಿಲಾಯಿತು.ಸಕಲಾಭರಣ ಸೇರಿದಂತೆ ತುಳಸಿ, ಕಮಲ, ಸಂಪಿಗೆ, ಗುಲಾಬಿ, ದುಂಡು ಮಲ್ಲಿಗೆ, ಕನಕಾಂಬರ, ಸುಗಂಧರಾಜ, ಸೇವಂತಿಗೆ, ಚೆಂಡು ಸೇರಿದಂತೆ ಬಗೆ ಬಗೆಯ ಪುಷ್ಪಗಳಿಂದ ನಯನಮನೋಹರವಾಗಿ ದೇವರನ್ನು ಸಿಂಗಾರ ಮಾಡಲಾಗಿತ್ತು.
ಭಕ್ತರು ತಾವು ತಂದಿದ್ದ ಹೂವು, ಹಣ್ಣು, ಕಾಯಿ ಅರ್ಪಿಸಿ, ಕಾಣಿಕೆ ನೀಡಿ ಭಕ್ತಿ ಸಮರ್ಪಿಸಿ ದೇವರ ವೈಭವೋಪೇತ ಅಲಂಕಾರವನ್ನು ಕಣ್ತುಂಬಿಕೊಂಡರು.
Kshetra Samachara
10/01/2025 08:32 pm