ಚಿತ್ರದುರ್ಗ: ಚಿತ್ರದುರ್ಗದ ಮುರುಘಾಮಠದಲ್ಲಿ ಕಳವು ನಡೆದಿದ್ದು ಕಳ್ಳತನದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಠದ ರಾಜಾಂಗಣದಲ್ಲಿ ಗೋಡೆಗೆ ಹಾಕಲಾಗಿದ್ದ ಮುರುಘಾ ಶ್ರೀಗಳು ಹಾಗೂ ಅವರ ಜೊತೆಗೆ ಇದ್ದ ರಾಷ್ಟ್ರಪತಿಗಳು, ಸಿಎಂಗಳು ಹಾಗೂ ನಾಡಿನ ಗಣ್ಯರು ಇದ್ದ ಸುಮಾರು 47 ಫೋಟೋಗಳು ಕಳುವಾಗಿವೆ.
ಈ ಘಟನೆ ಇದೇ ಅಕ್ಟೋಬರ್ 5ರಂದು ರಾತ್ರಿ ವೇಳೆ ನಡೆದಿದ್ದು, ಇನ್ನೂ ಸಿಸಿಟಿವಿ ಕ್ಯಾಮೆರಾದಲ್ಲಿ ಕದಿಯುವ ದೃಶ್ಯಗಳು ಸೆರೆಯಾಗಿದೆ. ಕಳ್ಳತನದಲ್ಲಿ ಸುಮಾರು ಎರಡಕ್ಕೂ ಹೆಚ್ಚು ಜನ ಬಾಗಿ ಆಗಿರೊ ಸಾದ್ಯತೆ ಕಂಡು ಬಂದಿದೆ ಪೋಟೋ ಕಳ್ಳತನವಾದ ಬಗ್ಗೆ ಆಡಳಿತ ಮಂಡಳಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಪೋಲೀಸರು ಅರೋಪಿಗಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ.
PublicNext
09/10/2022 12:47 pm