ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಮನ ಬೇರೆ ಕಡೆ ಸೆಳೆದು ಆರು ಲಕ್ಷ ದೋಚಿದ ಖತರ್ನಾಕ್ ಕಳ್ಳರು

ಚಿತ್ರದುರ್ಗ : ಗಮನ ಬೇರೆಡೆ ಸೆಳೆದು ಚಾಲಾಕಿ ಕಳ್ಳರು 6 ಲಕ್ಷ ದೋಚಿರುವ ಘಟನೆ ಜರುಗಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ನಗರದಲ್ಲಿ ಈ ಪ್ರಕರಣ ಜರುಗಿದೆ. ಹೊಳಲ್ಕೆರೆ ನಿವಾಸಿ ಷಡಕ್ಷರಯ್ಯ ಎಂಬುವವರಿಗೆ ಸೇರಿದ 6 ಲಕ್ಷ ಹಣ ಕದ್ದು ಎಸ್ಕೇಪ್ ಆಗಿದ್ದಾರೆ.

ಕರ್ನಾಟಕ ಬ್ಯಾಂಕ್ ನಿಂದ ಷಡಕ್ಷರಯ್ಯ ಹಣ ಡ್ರಾ ಮಾಡಿ ಮನೆಗೆ ಹೋಗುವಾಗ ಕಳ್ಳತನ ಮಾಡಲಾಗಿದೆ. ಬೈಕ್ ನಲ್ಲಿ ಬಂದಿದ್ದ ಇಬ್ಬರು ಚಾಲಾಕಿ ಕಳ್ಳರಿಂದ ಕೃತ್ಯ ಎಸಗಿದ್ದಾರೆ. ಇಬ್ಬರು ಬೈಕ್ ನಲ್ಲಿ ಹೋಗುತ್ತಿರುವ ದೃಶ್ಯ ಕೂಡಾ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಹೊಳಲ್ಕೆರೆ PSI ಸಚ್ಚಿನ್ ಪಾಟೀಲ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

20/11/2024 03:24 pm

Cinque Terre

12.3 K

Cinque Terre

0

ಸಂಬಂಧಿತ ಸುದ್ದಿ