ಚಿಕ್ಕಮಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಗಳ ಉಪಟಳ ಹೆಚ್ಚಾಗಿದ್ದು ಬಡವರು, ರೈತರ, ಹಾಗೂ ಕಾರ್ಮಿಕರನ್ನು ಸುಲಿದು ಶೋಷಣೆ ಮಾಡುತ್ತಿವೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಮಹೇಶ್ ತಿಳಿಸಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು ಮೈಕ್ರೋ ಫೈನಾನ್ಸ್ ಗಳು ಆರ್‌ಬಿಐ ನಿಯಮಗಳನ್ನು ಗಾಳಿಗೆ ತೂರಿ ಹೆಚ್ಚಿನ ಬಡ್ಡಿ ವಸೂಲಿ ಮಾಡುವುದರ ಜೊತೆಗೆ ಬಡ್ಡಿ ಅಥವಾ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸದಿದ್ದರೆ ಗೂಂಡಗಳನ್ನು ಮನೆ ಬಳಿ ಕಳುಹಿಸಿ ಬೆದರಿಸುತ್ತಿದ್ದಾರೆ. ಇಂತಹ ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಚಿಕ್ಕಮಗಳೂರಿನಿಂದಲೇ ಹೋರಾಟ ಆರಂಭಿಸಲಿದೆ ಎಂದು ಮಹೇಶ್ ತಿಳಿಸಿದ್ದಾರೆ.
Kshetra Samachara
04/02/2025 06:51 pm