ಚಿಕ್ಕಮಗಳೂರು: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಚಿಕ್ಕಮಗಳೂರು ಕಛೇರಿಯಯಲ್ಲಿ ಜನವರಿ 22 (ನಾಳೆ ಬುಧವಾರ) ರಂದು ಬೆಳಿಗ್ಗೆ 10.30 ಗಂಟೆಗೆ ಖಾಸಗಿ ಕಂಪನಿಯಾದ ಸುಗುಣ ಫುಡ್ಸ್ ಪ್ರೈ.ಲಿ. ಚಿಕ್ಕಮಗಳೂರಿನಲ್ಲಿ ಖಾಲಿ ಇರುವ (ಪೌಲ್ಟ್ರಿ ಫಾರ್ಮ್ ಸೂಪರ್ ವೈಸರ್) ಹುದ್ದೆಗೆ ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ. ಪ್ರವೇಶ ಉಚಿತವಾಗಿದ್ದು, ಯಾವುದೇ ಪದವಿ ಅರ್ಹತೆ ಹೊಂದಿರುವ 18 ರಿಂದ 35 ವರ್ಷ ವಯೋಮಿತಿಯ ಪುರುಷ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ದೂರವಾಣಿ: 9945198500/ 08262-295538 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
21/01/2025 05:54 pm