ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರಿನಲ್ಲಿ ಇಂದು ಬೃಹತ್ ಉದ್ಯೋಗ ಮೇಳ- ಪ್ರತಿಷ್ಠಿತ ಕಂಪನಿಗಳು ಭಾಗಿ

ಚಿಕ್ಕಮಗಳೂರು: ನಗರದ ಎವಿಎಸ್ ಬಿ.ಎಡ್ ಕಾಲೇಜ್ ವತಿಯಿಂದ ಹಾಗೂ ಉತ್ತರ ಕನ್ನಡ ಜಿಲ್ಲಾ ಶಿಕ್ಷಕರ ನಿರಂತರ ಸಹಾಯವಾಣಿ ಸಹಯೋಗದೊಂದಿಗೆ ಇಂದು ಜನವರಿ 19ರಂದು ಬೆಳಗ್ಗೆ 9 ಗಂಟೆಗೆ ನಗರದ ಐಡಿಎಸ್‌ಜಿ ಕಾಲೇಜು ಸಮೀಪದ ಮಹಾಲಕ್ಷ್ಮಿ ದೇವಸ್ಥಾನದ ಎದುರಿನ ಎವಿಎಸ್ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಚಿಕ್ಕಮಗಳೂರಿನ ಎವಿಎಸ್ ಬಿಎಡ್ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಅಜೇಶ್ ತಿಳಿಸಿದ್ದಾರೆ.

ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳಾದ ಬಾಷ್, ಅಮೆಜಾನ್, ರಾಯಲ್ ಮಾರ್ಟ್ ಮ್ಯಾಜಿಕ್ ಬಸ್, ಆಕ್ಸಿಸ್ ಬ್ಯಾಂಕ್, ಟೊಯೋಟಾ, ಎಸ್ ಬಿ ಐ, ಕೋಟಕ್ ಮಹೀಂದ್ರಾ, ಶ್ರೀರಾಮ್ ಫೈನಾನ್ಸ್, ಹೆಚ್ ಡಿ ಎಫ್ ಸಿ ಬ್ಯಾಂಕ್, ಅಪೋಲೋ, ಓಲಾ ಎಲೆಕ್ಟ್ರಿಕಲ್ ಸೇರಿದಂತೆ ಮತ್ತಷ್ಟು ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿದ್ದು ಚಿಕ್ಕಮಗಳೂರಿನಲ್ಲಿ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಅಜೇಶ್ ತಿಳಿಸಿದ್ದಾರೆ.

Edited By : Ashok M
PublicNext

PublicNext

19/01/2025 08:01 am

Cinque Terre

36.8 K

Cinque Terre

0