ಕರ್ನಾಟಕ ಅಲೆಮಾರಿ ಹಕ್ಕಿಪಿಕ್ಕಿ ಬುಡುಕಟ್ಟು ಜನಾಂಗದವರಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾಂಕೇತಿಕವಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ಹಕ್ಕಿಪಿಕ್ಕಿ ಬುಡುಕಟ್ಟು ಜನಾಂಗದ ರಾಜ್ಯಾಧ್ಯಕ್ಷ ಜಗ್ಗು ಮಾತನಾಡಿದ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರು ಈ ದೇಶದ ಮೂಲವಾಸಿಗಳಾದ ಅಲೆಮಾರಿ ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದವರಿಗೆ ಯಾವುದೇ ಶಾಶ್ವತ ವಾದ ನೆಲೆ ಕಲ್ಪಿಸಿ ಕೂಡಲಿಲ್ಲ. ನೆಲೆ ಇಲ್ಲದ ಬದುಕಿಗೆ ಶಾಶ್ವತವಾದ ನೆಲೆ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅಧಿಕಾರಿಗಳ ಎಚ್ಚೆತ್ತುಕೊಂಡು ಈ ಸಮುದಾಯಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಸಮಿತಿ ಒತ್ತಾಯಿಸಿದೆ ಇದರ ಜೊತೆಗೆ ಹಕ್ಕಿಪಿಕ್ಕಿ ಜನಾಂಗದಿಂದ
ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಮ್ಮ ಪ್ರತಿಭಟನೆ ಮೂಲಕ ನಮ್ಮ ಏನೆಲ್ಲಾ ಬೇಡಿಕೆಗಳಿದೆ ಅದರ ಒಂದು ಪ್ರತಿಯನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.ನಮ್ಮ ಪ್ರಮುಖ ಬೇಡಿಕೆಗಳಲ್ಲಿ ಒಟ್ಟಾರೆ ಹಕ್ಕಿಪಿಕ್ಕಿ ಸಮುದಾಯದ ನಿವೇಶನ ರಹಿತರಿಗೆ ನಿವೇಶನಗಳನ್ನು ನೀಡುವುದು, ವಸತಿ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡುವುದು, ಗಂಗಾಕಲ್ಯಾಣಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ಗುರುತಿಸಿ ಕೂಳವೆ ಬಾವಿ ಮಂಜೂರು ಮಾಡಿಕೂಡುವುದು, ಸಮುದಾಯದ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಸಹಾಯದನ ಕಲ್ಪಿಸಿಕೂಡುವುದು, ಜನಾಂಗಕ್ಕೆ ಸಮುದಾಯ ಭವನ ಮಂಜೂರುಮಾಡಿ ಕೊಡಬೇಕು ಎಂದು ತಿಳಿಸಿದರು.ತದನಂತರ ಎ.ಡಿ.ಸಿರವರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದಾರೆ.
PublicNext
30/09/2022 09:00 pm