ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರದಲ್ಲಿ ಗಗನಕೇರಿದ ತರಕಾರಿ ಬೆಲೆ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ವಿವಿಧ ಬೆಳೆಗಳು ನಾಶವಾಗಿದ್ದು, ದಿನ ಕಳೆದಂತೆ ತರಕಾರಿ ಬೆಲೆ ಗಗನಕ್ಕೆ ಏರುತ್ತಿದೆ ಇದರ ಪರಿಣಾಮ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಮಾದಲು ಬ್ಯಾಗ್ ತುಂಬಾ ತರಕಾರಿ ಖರೀದಿ ಮಾಡುವವರು ಇಂದು ಅರ್ದ ಬ್ಯಾಗ್ ಗೆ ಸೀಮಿತವಾಗುತ್ತಿದ್ದಾರೆ.

ಈ ನಡುವೆ ತರಕಾರಿ ಬೆಳೆದಂತಹ ರೈತರಿಗೆ ಸಿಹಿ ಸುದ್ದಿ ಆದರೆ, ಮತ್ತೊಂದೆಡೆ ಬಡವರಿಗೆ ನಿರ್ಗತಿಕರಿಗೆ ಹಾಗೂ ಮಾಧ್ಯಮ ವರ್ಗದವರಿಗೆ ತರಕಾರಿ ಖರೀದಿ ಕಹಿ ಎನ್ನುವಂತಾಗಿದೆ. ತರಕಾರಿ ಅಂಗಡಿಗಳಲ್ಲಿ ಹಾಗೂ ಮಾರುಕಟ್ಟೆಗಳಲ್ಲಿ ಈ ಮೊದಲು ಒಂದು ಕೆಜಿ ಖರೀದಿಸುವ ಗ್ರಾಹಕರಿಗೆ ಇದೀಗ ಅರ್ಧ ಕೆಜಿ ಕಾಲ್ ಕೆಜಿ ಖರೀದಿಸುವ ಪರಿಸ್ಥಿತಿ

ಎದುರಾಗಿದೆ.

ಇನ್ನು ಕೆಲವು ತರಕಾರಿಗಳಂತೂ ಒಂದು ಕೆಜಿಗೆ ಬೆಲೆ ಹೆಚ್ಚಾಗಿರುವರಿಂದ ಆ ತರಕಾರಿಯನ್ನು ಖರೀದಿಸದೆ ವಾಪಾಸ್ ಹೋಗುತ್ತಿದ್ದಾರೆ. ಕೆಲವರು ಬೆಲೆ ಹೆಚ್ಚಾದರೂ ಪರವಾಗಿಲ್ಲ ಅರ್ಧ ಕೆಜಿ ಕೊಡಿ ಎಂದು ಖರೀದಿ ಮಾಡುತ್ತಿದ್ದಾರೆ.ಇನ್ನು ವ್ಯಾಪಾರಸ್ಥರ ಗೋಳು ಹೇಳುತ್ತಿರದಾಗಿದೆ .

Edited By : PublicNext Desk
Kshetra Samachara

Kshetra Samachara

28/09/2022 07:32 pm

Cinque Terre

2.06 K

Cinque Terre

0