ಚಿಕ್ಕಬಳ್ಳಾಪುರ : ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣಕ್ಕೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮಿಸುತ್ತಿದ್ದು. ಸಿಪಿಐಎಂ ಪಕ್ಷದ ರಾಜಕೀಯ ಸಮಾವೇಶವನ್ನು ಅವರು ಉದ್ಘಾಟಿಸಲಿದ್ದಾರೆ.
ರಾಜಕೀಯ ಸಮಾವೇಶಕ್ಕೆ ಬಾಗೇಪಲ್ಲಿ ಪಟ್ಟಣ ಹೊರವಲಯದ ಹೊಸಹುಡ್ಯ ಬಸ್ ಡಿಪೋ ಬಳಿ ಬೃಹತ್ ವೇದಿಕೆ ಸಿದ್ದಗೊಂಡಿದ್ದು. ಈಗಾಗಲೇ ಬಾಗೇಪಲ್ಲಿ ಪಟ್ಟಣದ ಪ್ರಮುಖ ರಸ್ತೆಗಳು, ಗಲ್ಲಿಗಳಲ್ಲಿ ಕೆಂಬಾವುಟಗಳಿಂದ ಸಿಂಗಾರಗೊಂಡು.ನಾಳೆ ನಡೆಯಲಿರುವ ಸಿಪಿಐಎಂನ ರಾಜಕೀಯ ಸಮಾವೇಶಕ್ಕೆ ಕೇರಳ ಮುಖ್ಯಮಂತ್ರಿ, ಕಾಮ್ರೆಡ್ ಪಿಣರಾಯ್ ವಿಜಯನ್, ಕೇಂದ್ರದ ಪೊಲಿಟ್ ಬ್ಯೂರೋ ಸದಸ್ಯರಾದ ಎಂ.ಎ.ಬೇಬಿ, ಜಿವಿ.ರಾಘವುಲು, ಕೇಂದ್ರ ಸಮಿತಿ ಸದಸ್ಯ ಕೆ.ಎನ್.ಉಮೇಶ್, ರಾಜ್ಯ ಕಾರ್ಯದರ್ಶಿ ಬಸವರಾಜು ಸೇರಿದಂತೆ ಪಕ್ಷದ ಪ್ರಮುಖರು ಆಗಮಿಸಲಿದ್ದಾರೆ ಎಂದು ಸಿಪಿಐಎಂ ಪಕ್ಷದ ಮುಖಂಡರು ತಿಳಿಸಿದ್ದಾರೆ .
PublicNext
18/09/2022 02:50 pm