ಚಿಕ್ಕಬಳ್ಳಾಪುರ: ಕೆಎಸ್‌ಆರ್‌ಟಿಸಿ ಬಸ್ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಬಿಬಿ ರಸ್ತೆಯ ಗಿರಿಯಾಸ್ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ದೇವನಹಳ್ಳಿಯ ಅತ್ತಿಬೆಲೆ ನಿವಾಸಿ ಮುರುಳಿ ಎಂದು ತಿಳಿದು ಬಂದಿದೆ. ಅನ್ಯ ಕೆಲಸದ ನಿಮಿತ್ತ ಚಿಕ್ಕಬಳ್ಳಾಪುರ ನಗರಕ್ಕೆ ಬರುತ್ತಿದ್ದ ಮುರುಳಿ. ಚಿಕ್ಕಬಳ್ಳಾಪುರ ನಗರದಿಂದ ದೊಡ್ಡಬಳ್ಳಾಪುರ ಮಾರ್ಗವಾಗಿ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಕಂದಾವರ ರಸ್ತೆ ಕಾಮಗಾರಿ ಸರಿ ಇಲ್ಲದ ಕಾರಣ ನಗರದ ಬಿಬಿ ರಸ್ತೆಯ ಹೋಗುವಾಗ ಗಿರಿಯಾಸ್ ಬಳಿ ಬಸ್ ಹಾಗೂ ಆಕ್ಟಿವ್ ಹೋಂಡಾ ಬೈಕ್ ನಡುವೆ ಅಪಘಾತ ನಡೆದಿದೆ. ಸವಾರ ಹೆಲ್ಮೆಟ್ ಧರಿಸದ ಹಿನ್ನಲೆ ಬಸ್ ಹಿಂದೆ ಚಕ್ರವು ತಲೆಯ ಮೇಲೆ ಹರಿದು ಸ್ಥಳದಲ್ಲೇ ಸವಾರ ಮುರಳಿ ಸಾವನ್ನಪ್ಪಿದ್ದಾನೆ. ಬೈಕ್ ಸವಾರ ಆಯತಪ್ಪಿ ಬಿದ್ದು ಕೆಎಸ್‌ಆರ್‌ಟಿಸಿ ಬಸ್ ಹಿಂಬದಿ ಚಕ್ರಕ್ಕೆ ಸಿಲುಕಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇನ್ನೂ ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಘಟನೆ ಬಳಿಕ ಸುಮಾರು ಒಂದು ಗಂಟೆಗೂ ಅಧಿಕ ಸಮಯ ಟ್ರಾಫಿಕ್ ಜಾಮ್ಉಂಟಾಗಿದ್ದು. ಘಟನೆಗ ಸಂಭಂದಿಸಿದಂತೆ ನಗರ ಠಾಣೆಯ ಪೊಲೀಸರು ದ್ವಿಚಕ್ರ ವಾಹನ ಸೇರಿದಂತೆ ಬಸ್‌ವನ್ನು ಜಪ್ತಿ ಮಾಡಿಕೊಂಡಿದ್ದಾರೆ. ಇನ್ನೂ ಮೃತ ದೇಹವನ್ನು ಸರ್ಕಾರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
PublicNext
22/09/2022 01:48 pm